1.
ಮಹಿಳೆಗೆ ಲೈಂಗಿಕ ಕಿರುಕುಳ
ಧಾರವಾಡದ ನೆಕ್ಟರ್ ಬೆವರೇಜಸ್ ತಂಪು ಪಾನೀಯ ಉತ್ಪಾದನಾ ಕಂಪನಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಈ ಕುರಿತು ಇಬ್ಬರನ್ನು ವಶಕ್ಕೆ ಪಡೆದಿರುವ ಉಪನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
https://publicnext.com/article/nid/Hubballi-Dharwad/Crime/node=628372
2.
ಅಣ್ಣಿಗೇರಿ ಹೆದ್ದಾರಿಯಲ್ಲಿ ದರೋಡೆ
ಅಣ್ಣಿಗೇರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಕೇಸ್ ನಡೆದಿದೆ. ಸೋಮವಾರ ರಾತ್ರಿ ಭದ್ರಾಪುರ ಸೇತುವೆ ಬಳಿ ವಾಹನವನ್ನು ಅಡ್ಡಗಟ್ಟಿದ ದರೋಡೆಕೋರರು ಚಾಲಕ ಹಾಗೂ ಕ್ಲೀನರ್ ಕಣ್ಣಿಗೆ ಖಾರದ ಪುಡಿ ಎರಚಿ 1 ಲಕ್ಷ 22 ಸಾವಿರ ನಗದು ದೋಚಿದ್ದಾರೆ.
https://publicnext.com/article/nid/Hubballi-Dharwad/Crime/node=628448
3.
ದರೋಡೆಕೋರರ ಬಂಧನ
ವಾಯುವಿಹಾರಿಗಳನ್ಉ ಬೆದರಿಸಿ ಮೊಬೈಲ್ ಹಾಗೂ ಚಿನ್ನಾಬರಣ ದೋಚಿದ್ದ ಖದೀಮರನ್ನು ಹುಬ್ಬಳ್ಳಿ ಅಶೋಕನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಟಿಪ್ಪು ಸುಲ್ತಾನ್ ಬೇಪಾರಿ ಎಂಬಾತ ಈ ಕೇಸ್‌ನ ಪ್ರಮುಖ ಆರೋಪಿಯಾಗಿದ್ದು, ಬಂಧಿತರಿಂದ ಚಿನ್ನಾಭರಣ, ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
https://publicnext.com/article/nid/Hubballi-Dharwad/Crime/node=628309
4.
ಪತ್ನಿಯ ಕೊಲೆ ಆರೋಪ ಸಾಬೀತು
ಅನುಮಾನಪಟ್ಟು ಪತ್ನಿಯನ್ನು ಕೊಲೆ ಮಾಡಿದ್ದ ಪತಿ ಮೇಲಿನ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಹುಬ್ಬಳ್ಳಿ ಕೇಶ್ವಾಪುರ ನಿವಾಸಿ ಕಿಶೋರ್ ಎಂಬಾತ ಅಪರಾಧಿಯಾಗಿದ್ದು ಮಾರ್ಚ 30ರಂದು ಪ್ರಕರಣದ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
https://publicnext.com/article/nid/Hubballi-Dharwad/Crime/node=628149
5.
ಠಾಣೆ ಮುಂದೆ ಪ್ರತಿಭಟನೆ
ರಾತ್ರಿ ವೇಳೆ ಮನೆ ಹೊರಗೆ ನಿಂತಿದ್ದರೆಂಬ ಕಾರಣಕ್ಕೆ ನೂರಕ್ಕೂ ಹೆಚ್ಚು ಜನರನ್ನು ಸುಖಾಸುಮ್ಮನೇ ಬಂಧಿಸಲಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಎಐಎಂಐಎಂ ಪಕ್ಷದ ಮುಖಂಡರು ಕಸಬಾ ಪೇಟ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
https://publicnext.com/article/nid/Hubballi-Dharwad/Law-and-Order/node=628350
6.
ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಏಪ್ರಿಲ್ ೧೪ಎರಿಂದ ಪುನಃ ಹೋರಾಟ ಆರಂಭಿಸಲಾಗುವುದು ಎಂದು ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ. ಇದು ನಮ್ಮ ಸಾಂವಿಧಾನಿಕ ಹಕ್ಕು ಎಂದು ಶ್ರೀಗಳು ಪ್ರತಿಪಾದಿಸಿದ್ದಾರೆ.
https://publicnext.com/article/nid/Hubballi-Dharwad/Politics/News/Public-News/node=628377
7.
ಮೂಲಸೌಕರ್ಯ ವಂಚಿತ ಬೂದನಗುಡ್ಡ
ಮಲೆನಾಡ ಸೆರಗಿನಲ್ಲಿರುವ ಕಲಘಟಗಿ ತಾಲ್ಲೂಕಿನ ಬೂದನಗುಡ್ದ ಚನ್ನಬಸವಣ್ಣ ದೇವಸ್ಥಾನದ ಆವರಣ ಮೂಲ ಸೌಕರ್ಯಗಳಿಲ್ಲದೇ ಸೊರಗುತ್ತಿದೆ. ಇಲ್ಲಿ ನಿತ್ಯ ಬರುವ ಭಕ್ತರು ದೇವಸ್ಥಾನದ ಪ್ರಾಂಗಣವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ಮನವಿ ಮಾಡಿದ್ದಾರೆ.
https://publicnext.com/article/nid/Hubballi-Dharwad/Infrastructure/Religion/node=628304
8.
ಅಯ್ಯೋ ಗಬ್ಬು ನಾತ!
ಧಾರವಾಡದ ವಾರ್ಡ್ ನಂಬರ್ 5ರ ಕೆಎಸ್ಆರ್‌ಟಿಸಿ ಡಿಪೊ ಮುಂಬಾಗದ ಜನ ಚರಂಡಿ ದುರ್ವಾಸಮೆಯಿಂದ ಬೇಸತ್ತಿದ್ದಾರೆ. ಕಳೆದ ಏಳೆಂಟು ತಿಂಗಳಿಂದ ಇಲ್ಲಿನ ಚರಂಡಿ ಬ್ಲಾಕ್ ಆಗಿದ್ದು ಇದರಿಂದ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಸ್ಥಳೀಯರು ಪಾಲಿಕೆ ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ.
https://publicnext.com/article/nid/Hubballi-Dharwad/Infrastructure/node=628491
9.
ಬೆಂಗೇರಿ ದೇವಿಯ ಭಂಡಾರ ಜಾತ್ರೆ
ಹುಬ್ಬಳ್ಳಿ ಬೆಂಗೇರಿಯ ಗ್ರಾಮ ದೇವಿ ಭಂಡಾರ ಜಾತ್ರೆ ಸಂಭ್ರಮದಿಂದ ನಡೆಯಿತು. ಇದು ಭಂಡಾರದ ಜಾತ್ರೆ ಎಂದೇ ಪ್ರಸಿದ್ಧಿ ಹೊಂದಿದೆ. 21 ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆ ಹಲವಾರು ಸಾಂಪ್ರದಾಯಿಕ ಆಚರಣೆಗಳಿಂದ ಕೂಡಿದೆ.
https://publicnext.com/article/nid/Hubballi-Dharwad/Cultural-Activity/node=628439
10.
ನಾಮದೇವ ಹರಿಮಂದಿರಕ್ಕೆ ಕಳಸಾರೋಹಣ
ಧಾರವಾಡ ಬಾಳಿಕಾಯಿ ಓಣಿಯ ಹರಿಮಂದಿರಕ್ಕೆ ಕಳಸಾರೋಹಣ ಸಮಾರಂಭ ಸಂಭ್ರಮದಿಂದ ನಡೆಯಿತು. ಇದಕ್ಕೂ ಮುನ್ನ 108 ಪೂರ್ಣ ಕುಂಭಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಕಳಸವನ್ನು ಮೆರವಣಿಗೆ ಮಾಡಲಾಯಿತು.
https://publicnext.com/article/nid/Hubballi-Dharwad/News/node=628540
Kshetra Samachara
29/03/2022 10:02 pm