ಹುಬ್ಬಳ್ಳಿ: ರಾತ್ರಿವೇಳೆ ಮನೆ ಹೊರಗೆ ನಿಂತಿರುವ ಸಾರ್ವಜನಿಕರನ್ನು ಸುಕಾಸುಮ್ಮನೆ ಪೊಲೀಸರು ಅರೆಸ್ಟ್ ಮಾಡಿರುವ ಹಿನ್ನೆಲೆಯಲ್ಲಿ, ಹಳೇ ಹುಬ್ಬಳ್ಳಿಯ ಹಿರಿಯರು ಮುಸ್ಲಿಂ ಮುಖಂಡರು ರಾತ್ರೋರಾತ್ರಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ.
ಹಳೇ ಹುಬ್ಬಳ್ಳಿಯ ಜನರುವ ರಾತ್ರಿ ವೇಳೆ ಹೊರಗಡೆ ಕುಳಿತುಕೊಳ್ಳುವ ಕಾರಣಕ್ಕಾಗಿ ಸುಮಾರು 100 ಕ್ಕಿಂತ ಹೆಚ್ಚು ಜನರನ್ನು ಕಸಬಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಅವರನ್ನು ಅರೆಸ್ಟ್ ಮಾಡಿದ್ದರಂತೆ.
ಪೊಲೀಸರನ್ನು ಈ ನಡೆಯನ್ನು ಖಂಡಿಸಿ ಎಐಎಂಐಎಂ ಪಕ್ಷದ ನಾಯಕರು ಮುಖಂಡರು ಕಾರ್ಯಕರ್ತರು ಹಳೇ ಹುಬ್ಬಳ್ಳಿಯ ಕಸಬಾ ಪೇಟ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿ, ಎಲ್ಲಾ ಜನರನ್ನು ಬಿಡಿಸಿ ಹೊರಗೆ ತಂದಿದ್ದಾರೆ.
ಈ ರೀತಿ ಇನ್ನೊಂದು ಬಾರಿ ಪೊಲೀಸ್ ಮಾಡಿದ್ದೇ ಆದಲ್ಲಿ ಆಯುಕ್ತರ ಕಚೇರಿ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Kshetra Samachara
29/03/2022 03:40 pm