ಹುಬ್ಬಳ್ಳಿ: ನಟೋರಿಯಸ್ ಕ್ರಿಮಿನಲ್ ಜೊತೆಗೆ ಗೋವಾ ಪೊಲೀಸನೊಬ್ಬ ಎಸ್ಕೇಪ್ ಆಗಿದ್ದ ಪ್ರಕರಣ ಬೆನ್ನಟ್ಟಿದ ಹುಬ್ಬಳ್ಳಿ ಪೊಲೀಸರು, ಹತ್ತು ರಾಜ್ಯಗಳಿಗೆ ಬೇಕಾದ ನಟೋರಿಯಸ್ ರೌಡಿ ಜೊತೆಗೆ ಗೋವಾ ಪೊಲೀಸ್‌ನೊಬ್ಬನನ್ನ ಅರೆಸ್ಟ್ ಮಾಡಿದ್ದಾರೆ.
ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿಯನ್ನು ಗೋವಾ ಪೊಲೀಸರು ಅರೆಸ್ಟ್ ಮಾಡಿದ್ದರು. ಕಾವಲು ಕಾಯಲು ಅಮಿತ್ ನಾಯಕ ಎಂಬ ಪೊಲೀಸ್‌ನನ್ನು ಕರ್ತವ್ಯಕ್ಕೆ ನೇಮಿಸಿದ್ದರು. ಆದ್ರೆ ಅಮಿತ್ ನಾಯಕ ಸುಲೇಮಾನ್ ಸಿದ್ದಿಕಿಯನ್ನ ನಿನ್ನೆ ಮಧ್ಯರಾತ್ರಿ ಕಸ್ಟಡಿಯಿಂದ ಪರಾರಿ ಮಾಡಿಸಿದ್ದಾನೆ. ಹತ್ತಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿರುವ ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ. ಈತನ ಮೇಲೆ ಹೈದ್ರಾಬಾದ್, ಪುಣೆ, ದೆಹಲಿ, ಗೋವಾ ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ಮೇಲೆ ಕೊಲೆ, ಕೊಲೆ ಯತ್ನ, ಬೆದರಿಕೆ, ವಂಚನೆ ಭೂ ಮಾಫಿಯಾ ದಂಧೆಯಲ್ಲಿಯೂ ಸಾರ್ವಜನಿಕರನ್ನು ಹೆದರಿಸುವುದು ಅವರಿಂದ ದುಡ್ಡು ಕೀಳುವುದು, ದರೋಡೆ, ಮರ್ಡರ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಇಂತಹ ನಟೋರಿಯಸ್ ಕ್ರಿಮಿನಲ್ ಜೊತೆಗೆ ಗೋವಾ ರಾಜ್ಯದ ಪೊಲೀಸ್ ಠಾಣೆಯೊಂದರಿಂದ ಅಮಿತ್ ನಾಯಕ ಎಸ್ಕೇಪ್ ಆಗಿದ್ದ. ಗೋವಾದಿಂದ ತಲೆ ಮರೆಸಿಕೊಳ್ಳಲು ಇವರಿಬ್ಬರು ಹುಬ್ಬಳ್ಳಿಗೆ ಆಗಮಿಸಿದ್ದರು. ಈ ಇಬ್ಬರನ್ನೂ ಹಳೆ ಹುಬ್ಬಳ್ಳಿಯ ಪೊಲೀಸರು ಅರೆಸ್ಟ್ ಮಾಡಿ ಮುಂದಿನ ಕ್ರಮಕ್ಕಾಗಿ ಕೇಸ್‌ಅನ್ನು ಗೋವಾ ಪೊಲೀಸರಿಗೆ ವರ್ಗಾವಣೆ ಮಾಡಿದ್ದಾರೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/12/2024 01:25 pm