ಹುಬ್ಬಳ್ಳಿ:ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಜಾಲ ವ್ಯಾಪಕವಾಗಿ ಆವರಿಸಿದ್ದು ನಾನಾ ಬಗೆಯಲ್ಲಿ ಜನರಿಗೆ ವಂಚನೆ ಮಾಡಿ ಅವರ ಖಾತೆಯಲ್ಲಿದ್ದ ಹಣವನ್ನು ಕ್ಷಣಾರ್ಧದಲ್ಲಿ ಮಾಯ ಮಾಡುವವರ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅದೇ ರೀತಿ ನಗರದ ಪ್ರತಿಷ್ಠಿತ ಕಾಲೇಜಿನ ಪ್ರಿನ್ಸಿಪಾಲ್ ಅವರನ್ನು ನಕಲಿ ಪೊಲೀಸ್ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ದೋಚಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ವಿದ್ಯಾನಗರದಲ್ಲಿನ ಆರ್ಟ್ಸ್ ಕಾಲೇಜಿನ ಪ್ರಿನ್ಸಿಪಲ್ ಆದ ನಿರ್ಮಲಾ ಸೋಮನಗೌಡ ಪಾಟೀಲ್ ಎಂಬುವರಿಗೆ ವಾಟ್ಸಾಪ್ ಮೂಲಕ ಕರೆ ಮಾಡಿದ ಸೈಬರ್ ವಂಚಕರು ನಿಮ್ಮ ಆಧಾರ್ ಕಾರ್ಡ್ ಮಾನವ ಕಳ್ಳ ಸಾಗಾಣಿಕೆ ಮಾಡುವ ಗ್ಯಾಂಗ್ ನ ಮೊಬೈಲ್ ನಂಬರ್ ಜೊತೆ ಲಿಂಕ್ ಇದೆ ಹೀಗಾಗಿ ನೀವು ಸಿಬಿಐ ಗೆ ಕಂಪ್ಲೇಂಟ್ ಕೊಡಿ ನಿಮ್ಮ ಕಾಲ್ ನ ಕನೆಕ್ಟ್ ಮಾಡ್ತೀವಿ ಅಂತಾ ನಿರ್ಮಲಾ ಅವರಿಗೆ ಹೇಳಿದ್ದಾರೆ.
ಆಗ ಕನೆಕ್ಟ್ ಆಗಿ ಮಾತನಾಡಿದ ಇನ್ನೊಬ್ಬ ವಂಚಕ ನಿಮ್ಮ ಆಧಾರ್ ಐಡಿ ಮಕ್ಕಳ ಅಪಹರಣ, ಕೊಲೆ,ಹಾಗೂ ಅಂಗಾಂಗಗಳ ಮಾರಾಟ ಮಾಡುವ ಕೃತ್ಯದ ಜೊತೆಗೆ 6.8 ಮಿಲಿಯನ್ ಹಣ ಕಾನೂನು ಬಾಹಿರ ಟ್ರಾನ್ಸಾಕ್ಷನ್ ನಲ್ಲಿ ಭಾಗಿಯಾಗಿದ್ದು ಇದನ್ನು ನಾವು ಟ್ರ್ಯಾಕ್ ಮಾಡುತ್ತಿದ್ದೇವೆ ಎಂದು ಜೊತೆಗೆ ನಿಮ್ಮನ್ನು ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ವಿಚಾರಣೆ ನಡೆಸಬೇಕು ಎಂದು ಹೇಳಿ ವಿವಿಧ ಖಾತೆಗಳಿಗೆ 14,90,000 ಹಣವನ್ನು ವರ್ಗಾವಣೆ ಮಾಡಿಕೊಂಡು ಈ ಬಗ್ಗೆ ಯಾರಿಗೂ ಹೇಳಬೇಡಿ ಇದು ತುಂಬಾ ರಹಸ್ಯವಾಗಿರುತ್ತದೆ ಎಂದು ಪ್ರಿನ್ಸಿಪಾಲ್ ಗೆ ವಂಚನೆ ಮಾಡಲಾಗಿದೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಲಾಗುತ್ತಿದೆ ಎಂದು ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಸೈಬರ್ ವಂಚಕರು ನಾನಾ ವಿಧದಲ್ಲಿ ವಂಚನೆ ಮಾಡೋದನ್ನು ಕೇಳಿದ್ದೇವೆ ಆದ್ರೆ ಇದೀಗ ವಂಚಕರು ಪೊಲೀಸ್,ಸಿಬಿಐ ಹೆಸರು ಹೇಳಿಕೊಂಡು ಸಾರ್ವಜನಿಕರನ್ನು ವಂಚನೆ ಮಾಡುತ್ತಿರೋದು ಹೆಚ್ಚಾಗಿದ್ದು ಸಾರ್ವಜನಿಕರು ಈ ಬಗ್ಗೆ ಸ್ವತಃ ಜಾಗ್ರತೆ ವಹಿಸಬೇಕು ಎಂಬುದು ಖಾಕಿಯ ಕಳಕಳಿಯಾಗಿದೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/12/2024 12:50 pm