ಹುಬ್ಬಳ್ಳಿ: ನವನಗರದಲ್ಲಿನ ಕಟ್ಟಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ವಿಜಯಕುಮಾರ್ ಹಾಗೂ ಗಣೇಶ್ ಎಂಬುವರನ್ನು ಬಂಧನ ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಗನಿಗೆ ಹೇರ್ ಕಟ್ಟಿಂಗ್ ಅಂಗಡಿಯಲ್ಲಿ ಸರಿಯಾಗಿ ಕಟ್ಟಿಂಗ್ ಮಾಡಿಲ್ಲ ಎಂದು ಆರೋಪಿಸಿ ಶಾಪ್ ಒಳಗೆ ರಾಡ್ ನಿಂದ ಮೂವರು ಯುವಕರ ಮೇಲೆ ಹಲ್ಲೆಯನ್ನು ಮಾಡಿದ್ದಲ್ಲದೇ ಓರ್ವ ಯುವಕನನ್ನು ಕಾಲಿನಿಂದ ಒದ್ದಿರುವ ದೃಶ್ಯಗಳು ಶಾಪ್ ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಹೀಗಾಗಿ ಅಪ್ಪಾಜಿಯ ದೌರ್ಜನ್ಯ, ದರ್ಪದ ವಿಡಿಯೋವನ್ನು ವರದಿ ಸಹಿತ ಪಬ್ಲಿಕ್ ನೆಕ್ಸ್ಟ್ ವಿಸ್ತೃತವಾಗಿ ಪ್ರಸಾರ ಮಾಡಿದ ಬೆನ್ನಲ್ಲೇ ನವನಗರ ಠಾಣೆಯ ಪೊಲೀಸರು ಹಲ್ಲೆ ನಡೆಸಿದ ಆರೋಪಿಗಳಾದ ವಿಜಯಕುಮಾರ್ ಅಪ್ಪಾಜಿ ಹಾಗೂ ಗಣೇಶ್ ಎಂಬುವರ ಮೇಲೆ ಪ್ರಕರಣ ದಾಖಲು ಮಾಡಿ ಈ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
-ವಿನಯ ರೆಡ್ಡಿ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/12/2024 08:33 pm