ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮೊನ್ನೆಯಷ್ಟೇ ರಂಗಪಂಚಮಿ ಮುಗಿದಿದ್ದರೂ ಇಲ್ಲೊಂದು ಕಡೆಯಲ್ಲಿ ಮತ್ತೊಂದು ಜಾತ್ರೆ ರಂಗಿನಿಂದ ಮೆರುಗು ಪಡೆದುಕೊಂಡು ಭಂಡಾರದ ಜಾತ್ರೆಯಾಗಿ ಪ್ರಸಿದ್ಧಿ ಪಡೆದಿದೆ.
ಹೌದು.ಹುಬ್ಬಳ್ಳಿಯ ಬೆಂಗೇರಿಯ ಗ್ರಾಮ ದೇವಿಯ ಜಾತ್ರೆಯಲ್ಲಿ ಭಕ್ತರು ಭಂಡಾರವನ್ನು ತೂರುವ ಮೂಲಕ ವಿಜೃಂಭಣೆಯಿಂದ ಭಂಡಾರದ ಜಾತ್ರೆ ಮಾಡಿದರು. ಸುಮಾರು 21 ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆ ಸಾಕಷ್ಟು ಸಾಂಪ್ರದಾಯಿಕ ಆಚರಣೆಯಿಂದ ಕೂಡಿರುತ್ತದೆ.
ಹಿರಿಯರು, ಕಿರಿಯರು, ಮಹಿಳೆಯರು, ಪುರುಷರು ಎಂಬುವಂತ ಬೇಧವನ್ನು ಮರೆತು ಪರಸ್ಪರ ಭಂಡಾರ ತೂರುವ ಮೂಲಕ ಗ್ರಾಮದೇವತೆ ಜಾತ್ರೆ ಅದ್ದೂರಿಯಾಗಿ ಆಚರಿಸಲಾಯಿತು.
ಇನ್ನೂ ಗ್ರಾಮದೇವತೆಯ ಜಾತ್ರೆಯಲ್ಲಿ ದಿ.ಪವರಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಹಿಡಿದುಕೊಂಡ ಅಭಿಮಾನಿ ಅಪ್ಪುವಿನ ಪೋಟೋಗೆ ಭಂಡಾರ ತೂರುವ ಮೂಲಕ ವಿನೂತನವಾಗಿ ಅಭಿನಂದನೆ ಸಲ್ಲಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/03/2022 06:06 pm