ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಡಿಸೆಂಬರ್ 27ರಿಂದ ಧಾರವಾಡದಲ್ಲಿ ಸ್ಟಾರ್ಟಪ್ ಎಕ್ಸ್‌ಪೋ

ಧಾರವಾಡ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ರಫ್ತಾರ, ಭಾರತ ಸರ್ಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯದ ಜ್ಞಾನ ಪಾಲುದಾರ ಕೃಷಿಕ ಅಗ್ರಿ ಬಿಸಿನೆಸ್ ಇಂಕ್ಯೂಬೇಟರ್‌ನ ಅಡಿಯಲ್ಲಿ, ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ, ಇದೇ ಡಿಸೆಂಬರ್ 27-28ರಂದು ರಾಷ್ಟ್ರೀಯ ಅಗ್ರಿಟೆಕ್ ಸ್ಟಾರ್ಟಪ್ ಎಕ್ಸಪೋ (NASE-2024) ಆಯೋಜಿಸಲಾಗಿದೆ.

ಒಂದೇ ವೇದಿಕೆಯಲ್ಲಿ 200 ಸ್ಟಾರ್ಟಪ್‌ಗಳು ಪಾಲ್ಗೊಳ್ಳಲಿವೆ. ಸ್ಟಾರ್ಟಪ್‌ಗಳಿಂದ ಕೃಷಿ ನಾವೀನ್ಯತೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ವ್ಯವಹಾರ ಹಮ್ಮಿಕೊಳ್ಳಲು ಸ್ಟಾರ್ಟಪ್‌ಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ಕೂಡ ಸಿಗಲಿದೆ.

ಈಗಾಗಲೇ ಸ್ಟಾಲ್‌ಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಸ್ಟಾಲ್ ನೋಂದಣಿಗಾಗಿ https://krishik-abiuasd.org/ ನಲ್ಲಿ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು.

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/12/2024 01:07 pm

Cinque Terre

32.33 K

Cinque Terre

0

ಸಂಬಂಧಿತ ಸುದ್ದಿ