ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಶ್ರೀ ರಾಮಲಿಂಗೇಶ್ವರ 24ನೇ ಪುಣ್ಯಸ್ಮರಣೆ- ಪುರಾಣ ಪ್ರವಚನ, ಅನ್ನದಾನ ಸೇವೆ

ಕುಂದಗೋಳ: ಶ್ರೀ ರಾಮಲಿಂಗೇಶ್ವರ 24ನೇ ಪುಣ್ಯ ಸ್ಮರಣೆ ಮತ್ತು ಪುರಾಣ ಪ್ರವಚನ ಹುಬ್ಬಳ್ಳಿ ತಾಲೂಕು ಮಂಟೂರ ಗ್ರಾಮದಲ್ಲಿ ನೆರವೇರಿತು. ಈ ಸಂದರ್ಭ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಬಡಿಗ ವೃತ್ತಿ ಮಾಡುವ ಬಡ ಕುಟುಂಬದ ಮಾನಪ್ಪ ಬಡಿಗೇರ ಅವರು ಶ್ರೀ ರಾಮಲಿಂಗೇಶ್ವರ ಪುಣ್ಯಸ್ಮರಣೆಗೆ ಅನ್ನಸಂತರ್ಪಣೆ ಸೇವೆಗೈದು ಮಹಾಂತಲಿಂಗ ಶ್ರೀಗಳ ಮೆಚ್ಚುಗೆಗೆ ಪಾತ್ರರಾದರು.

ಕಳೆದ ಹಲವು ವರ್ಷಗಳಿಂದಲೂ ಅನ್ನ ಸಂತರ್ಪಣೆಗೆ ವಿಶೇಷ ಸೇವೆ ಮಾಡುವ ಮಾನಪ್ಪ, ಈ ವರ್ಷ ಮಂಟೂರ ಗ್ರಾಮದಲ್ಲಿ ಶ್ರೀರಾಮಲಿಂಗೇಶ್ವರ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದರು.

ಶ್ರೀ ರಾಮಲಿಂಗೇಶ್ವರ ಪುಣ್ಯಸ್ಮರಣೆ ನಿಮಿತ್ತ ಪುರಾಣ ಪ್ರವಚನ ಜರುಗಿತು. ಈ ಸಂದರ್ಭದಲ್ಲಿ ಕುಂದಗೋಳ, ಹುಬ್ಬಳ್ಳಿ ತಾಲೂಕಿನ ಭಕ್ತ ಜನತೆ ಭಾಗವಹಿಸಿದರು.

Edited By : Vinayak Patil
Kshetra Samachara

Kshetra Samachara

07/12/2024 05:00 pm

Cinque Terre

20.77 K

Cinque Terre

0

ಸಂಬಂಧಿತ ಸುದ್ದಿ