ಹುಬ್ಬಳ್ಳಿ : ವಾಯು ವಿಹಾರಕ್ಕೆ ಹೋಗಿದ್ದ ಸಾರ್ವಜನಿಕರನ್ನು ಹೆದರಿಸಿ ಅವರಿಂದ ಮೊಬೈಲ್ ಹಾಗೂ ನಗದು ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಅಶೋಕ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಗಂಗೂಬಾಯಿ ಹಾನಗಲ್ ಸಂಗೀತ ಶಾಲೆಯ ಹಿಂಭಾಗದಲ್ಲಿರುವ "ನಮೋ ಪಾರ್ಕ್" ಗೆ ವಾಯು ವಿಹಾರಕ್ಕೆ ಹೋಗಿದ್ದ ಇಬ್ಬರನ್ನು ಹೆದರಿಸಿ ಬೆದರಿಸಿ ಅವರಿಂದ 73 ಸಾವಿರ ಹಾಗೂ 27 ಸಾವಿರ ಮೌಲ್ಯದ ಎರಡು ಫೋನ್ ಸೇರಿದಂತೆ ನಗದನ್ನು ದೋಚಿ ಪರಾರಿಯಾಗಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೂಡಲೇ ತನಿಖೆಗೆ ಇಳಿದ ಇನ್ಸ್ ಪೆಕ್ಟರ್ ಅರುಣಕುಮಾರ ಸಾಳಂಕೆ ನೇತೃತ್ವದ ತಂಡ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಇದರಲ್ಲಿ ಪ್ರಮುಖ ಆರೋಪಿ ಟಿಪ್ಪು ಸುಲ್ತಾನ್ ಬೇಪಾರಿಯಾಗಿದ್ದಾನೆ. ಸದ್ಯ ಬೆದರಿಸಿ ಸಾರ್ವಜನಿಕರಿಂದ ಹಣದೊಚ್ಚುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Kshetra Samachara
29/03/2022 02:53 pm