ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಹಿಳೆ ವ್ಯಾನಿಟಿ ಬ್ಯಾಗಿನಲ್ಲಿದ್ದ 47 ಸಾವಿರ ಹಣ ಕದ್ದ ಕಳ್ಳರು

ಕುಂದಗೋಳ : ಸಾರಿಗೆ ಬಸ್ ಹತ್ತಿ ಪ್ರಯಾಣ ಬೆಳೆಸಲು ನಿಂತಿದ್ದ ಮಹಿಳೆಯೋರ್ವಳ ವ್ಯಾನಿಟಿ ಬ್ಯಾಗಿಗೆ ಕನ್ನ ಹಾಕಿದ ಕಳ್ಳರು ಬರೋಬ್ಬರಿ 47.000 ಸಾವಿರ ರೂಪಾಯಿ ಎಗರಿಸಿದ್ದಾರೆ.

ಹೌದು ! ಕುಂದಗೋಳ ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮರಿಯಮ್ಮ ಗ್ಯಾಬರಿಯಲ್ ಪೂಜಾರಿ ಎಂಬ ಮಹಿಳೆಯೂ ಡಿ‌ಸೆಂಬರ್ 9 ರಂದು ಕುಂದಗೋಳ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಪ್ರಯಾಣ ಬೆಳೆಸಲು ನಿಂತಾಗ ವ್ಯಾನಿಟಿ ಬ್ಯಾಗ್ ಒಳಗೆ ಇದ್ದ 47.000 ರೂಪಾಯಿ ನಗದು ಹಣವನ್ನು ಕಳ್ಳರು ದೋಚಿದ್ದಾರೆ.

ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ತನಿಖೆ ಮುಂದುವರಿದಿದೆ.

Edited By : PublicNext Desk
Kshetra Samachara

Kshetra Samachara

14/12/2024 11:57 am

Cinque Terre

18.98 K

Cinque Terre

0

ಸಂಬಂಧಿತ ಸುದ್ದಿ