ಕುಂದಗೋಳ : ಓಸಿ ಅಂಕಿ ಸಂಖ್ಯೆ ಬರೆಯುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಗುಡಗೇರಿ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಬಂಧಿತನಿಂದ 1885 ರೂಪಾಯಿ ವಶ ಪಡೆದಿದ್ದಾರೆ.
ಹೌದು ! ಗುಡಗೇರಿ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಟಾಕಪ್ಪಾ @ಸುನೀಲ್ ಸೋಮಪ್ಪ ಹಡಪದ ಎಂಬ ವ್ಯಕ್ತಿ ಓಸಿ ಅಂಕಿ ಸಂಖ್ಯೆಗಳನ್ನು ಬರೆಯಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಡಿ.6 ರಂದು ಈ ಘಟನೆ ನಡೆದಿದ್ದು, ಬಂಧಿತನಿಂದ ಪೊಲೀಸರು ಓಸಿ ಅಂಕಿ ಸಂಖ್ಯೆ ಬರೆಯುತ್ತಿದ್ದ ಕಾಗದ ಮತ್ತು 1885 ರೂಪಾಯಿ ನಗದು ಹಣ ವಶ ಪಡೆದಿದ್ದಾರೆ.
ಗುಡಗೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Kshetra Samachara
14/12/2024 11:10 am