ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್ ʻಡ್ರಮ್‌ ಮಾರೋ ಡ್ರಮ್‌ʼ

ದೊಡ್ಮನೆಯಲ್ಲಿ ವಾರದ ಟಾಸ್ಕ್‌ಗಾಗಿ ಎರಡು ತಂಡಗಳು ರಚನೆಯಾಗಿದೆ. ಎರಡು ತಂಡಗಳ ನಡುವೆ ಕ್ಯಾಪ್ಟನ್ಸಿ ಟಾಸ್ಕ್ ಗಾಗಿ ಜಿದ್ದಾ ಜಿದ್ದಿ ಶುರುವಾಗಿದೆ.

ಡ್ರಮ್‌ ಮಾರೋ ಡ್ರಮ್‌ ಟಾಸ್ಕ್‌ನಲ್ಲಿ ಹನುಮಂತು ಅವರ ತಂಡ ಮೊದಲ ಟಾಸ್ಕ್‌ನಲ್ಲಿ ಗೆದ್ದಿದೆ. ರಜತ್‌ ಅವರು ಉಸ್ತುವಾರಿ ಮಾಡಿದ ರೀತಿಗೆ ಎದುರಾಳಿ ತಂಡದವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್ ಗೌತಮಿ ಮಂಜು ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಿಟ್ಟಿದ್ದಾರೆ. ತಾನು ಆಡುತ್ತೇನೆ ಉಸ್ತುವಾರಿ ಮಾಡಲ್ಲವೆಂದಿರುವ ಚೈತ್ರಾ ಅವರನ್ನೇ ಗೌತಮಿ ಹಾಗೂ ಹನುಮಂತು ಅವರು ಉಸ್ತುವಾರಿ ಮಾಡಬೇಕೆಂದು ಹೇಳಿದ್ದಾರೆ.

ಆಡೋಕೆ ಕೊಡಲ್ಲ. ಉಸ್ತುವಾರಿ ಮಾಡಲ್ಲ ಅಂತೀನಿ ಹಟ ಕಟ್ಟಿ ಉಸ್ತುವಾರಿ ಕೊಡುತ್ತಾರೆ. ಎಲಿಮಿನೇಟ್‌ ಆಗಿ ವಾಪಾಸ್‌ ಬಂದಿದ್ದೀನಿ. ಇಡೀ ವಾರ ಆಟ ಆಡಿಲ್ಲ. ಕುಗ್ಗಿಸುತ್ತಾರೆ. ಆಡುತ್ತೀನಿ ಅಂದ್ರೆ ಆಡೋಕೆ ಕೊಡಲ್ಲ. ಆಮೇಲೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾರೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಚೈತ್ರಾ ಸಹ ಸ್ಪರ್ಧಿಗಳ ಜೊತೆ ಹೇಳಿಕೊಂಡಿದ್ದಾರೆ. ಚೈತ್ರಾ ಉಸ್ತುವಾರಿ ಮಾಡ್ತಾರಾ ಇಲ್ವಾ ಅನ್ನೋದನ್ನು. ಇವತ್ತಿನ ಸಂಚಿಕೆಯಲ್ಲಿ ಕಾದುನೋಡಬೇಕು.

Edited By : Suman K
PublicNext

PublicNext

12/12/2024 01:54 pm

Cinque Terre

14.18 K

Cinque Terre

0