ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ತುಂಬಾನೇ ಸ್ವೀಟ್ ಅಂಥಿದ್ದವರಿಗೆ ಶಾಕಿಂಗ್ ಸುದ್ದಿ . ನಾವು ಅಂದು ಕೊಂಡ ಹಾಗೆ ಮೋಕ್ಷಿತಾ ಸ್ವೀಟ್ ಅಲ್ಲ. ಖತರ್ನಾಕ್ ಕಿಲಾಡಿ ಅನ್ನೋದನ್ನು ಈ ಸ್ಟೋರಿ ಕೇಳಿದ ಮೇಲೆ ನೀವೇ ಹೇಳ್ತೀರಾ....
ಮೋಕ್ಷಿತಾ ಪೈ ತನ್ನ 20ನೇ ವಯಸ್ಸಿನಲ್ಲೇ ಕಿಡ್ನ್ಯಾಪ್ ಆರೋಪದ ಮೇಲೆ ಜೈಲಿಗೆ ಹೋಗಿ ಬಂದಿದ್ದರು. ಹೌದು, ಮಗುವೊಂದನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಮೇಲೆ ಜೈಲಿಗೆ ಹೋಗಿ ಬಂದಿರೋ ಖತರ್ನಾಕ್ ಹುಡುಗಿ ಮೋಕ್ಷಿತಾ . ಬಿಕಾಂ ಪದವೀಧರೆಯಾಗಿದ್ದಾಗ ಮೋಕ್ಷಿತಾ ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡ್ತಿದ್ಳು. ಟ್ಯೂಷನ್ ಗಾಗಿ ಸಾಕಷ್ಟು ಮಕ್ಕಳು ಈಕೆಯ ಮನೆಗೆ ಬರುತ್ತಿದ್ದರು. ವೃತ್ತಿಯಲ್ಲಿ ಶಿಕ್ಷಕಿ ಆಗಿದ್ದ ಮೋಕ್ಷಿತಾ ದುಡ್ಡಿನ ಅನಿವಾರ್ಯವಿರುವ ಕಾರಣ ತಪ್ಪು ದಾರಿ ಹಿಡಿದಿದ್ದಳು.
2014 ರಲ್ಲಿ ತನ್ನ ಸ್ನೇಹಿತ ನಾಗಭೂಷಣ್ ಜೊತೆ ಸೇರಿ ಮಗುವೊಂದನ್ನು ಕಿಡ್ನಾಪ್ ಮಾಡಿ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು ಎಂಬ ಆರೋಪದ ಮೇಲೆ ಜೈಲು ಸೇರಿದ್ದಳು ಅನ್ನುವ ಸುದ್ದಿ ಸದ್ಯ ವೈರಲ್ ಆಗ್ತಿದೆ. ಇದೀಗ ಕಿಡ್ನಾಪ್ ಕೇಸ್ ಖುಲಾಸೆಯಾಗಿದೆ. ಆದರೆ ಹಳೆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
PublicNext
11/12/2024 06:22 pm