ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಯಾ ಪೋಟೋಶೂಟ್‌ನಲ್ಲಿ ಮಿಂಚಿದ ಜಾಹ್ನವಿ ಕಪೂರ್

ಶ್ರೀದೇವಿ ಅಕಾಲಿಕ ಮರಣಕ್ಕೀಡಾದ ಮೇಲೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಶ್ರೀದೇವಿ ಪುತ್ರಿ ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಜಾಹ್ನವಿ ಕಪೂರ್ ಒಂದಾದ ಮೇಲೊಂದು ಸಿನಿಮಾಗಳನ್ನು ಮಾಡುತ್ತಾನೇ ಬರುತ್ತಿದ್ದು, ತಮ್ಮ ಉಡುಗೆ ತೊಡುಗೆಯಿಂದ ಕೂಡ ಆಗಾಗ ಗಮನ ಸೆಳೆಯುತ್ತಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಜಾಹ್ನವಿ ಕಪೂರ್ ಅವರ ಹೊಸ ಫೋಟೊ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಧಡಕ್ ಚಿತ್ರದಿಂದ ಚಿತ್ರರಂಗವನ್ನು ಪ್ರವೇಶಿಸಿದ ಜಾಹ್ನವಿ ಕಪೂರ್ ಸದ್ಯ ತಮ್ಮ ಅಭಿಮಾನಿಗಳಿಗೆ ಕೆಲ ಫೋಟೊ ಹಂಚಿಕೊಂಡಿದ್ದಾರೆ. ತಮ್ಮ ಸೌಂದರ್ಯದಿಂದ ಪಡ್ಡೆ ಹುಡುಗರನ್ನು ಕೆಣಕುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಜಾಹ್ನವಿ ಕಪೂರ್ ಅವರ ಈ ಹೊಸ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ವೈರಲ್ ಆದ ಈ ಫೋಟೊಗಳಲ್ಲಿ ಜಾಹ್ನವಿ ಕಪೂರ್ ಸಿಲ್ವರ್ ಕಾರ್ ಸೆಟ್ ಡ್ರೆಸ್ ನಲ್ಲಿ ಮಿರಮಿರ ಮಿಂಚಿದ್ದಾರೆ. ಕೆಲವರು ಜಾಹ್ನವಿ ಕಪೂರ್ ಅವರನ್ನು ದೇವತೆಯೆಂದು ಕರೆದರೆ ಇನ್ನೂ ಹಲವರು ನೀವು ಸೀರೆಯಲ್ಲಿಯೇ ತುಂಬಾ ಚೆನ್ನಾಗಿ ಕಾಣುತ್ತೀರಾ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡಿ ಎಂದು ಇನ್ನು ಕೆಲವರು ಜಾಹ್ನವಿ ಕಪೂರ್ ಅವರಿಗೆ ಸಲಹೆ ನೀಡುತ್ತಿದ್ದಾರೆ.

Edited By : Nirmala Aralikatti
PublicNext

PublicNext

11/12/2024 04:30 pm

Cinque Terre

10.55 K

Cinque Terre

0