ಹೈದರಬಾದ್ : ತೆಲುಗು ನಟ ಮೋಹನ್ ಬಾಬು ಮಂಚು ಅವರ ಕುಟುಂಬದ ಜಗಳ ಬೀದಿಗೆ ಬಂದಿದೆ. ಇದೇ ವೇಳೆ ಈ ಬಗ್ಗೆ ಪ್ರಶ್ನೆ ಕೇಳಲು ಹೋದ ವರದಿಗಾರನ ಮೇಲೆ ಮೋಹನ್ ಬಾಬು ಹಲ್ಲೆ ಮಾಡಿದ್ದಾರೆ. ರಿಪೋರ್ಟರ್ ಬಳಿ ಇದ್ದ ಮೈಕ್ ನಲ್ಲೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ತೆಲುಗು ನಟ ಮೋಹನ್ ಬಾಬು ಮನೆಯಲ್ಲಿ ಕಳೆದ ಕೆಲವು ದಿನಗಳಿಂದ ಆಸ್ತಿ ವಿಚಾರವಾಗಿ ಕಿರಿಕ್ ಶುರುವಾಗಿದೆ. ಮೋಹನ್ ಬಾಬು ಪುತ್ರರಾದ ಮಂಚು ಮನೋಜ್, ಮಂಚು ವಿಷ್ಣು ಕಿತ್ತಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಪ್ಪ-ಮಕ್ಕಳು ಪರಸ್ಪರ ಪೊಲೀಸ್ ದೂರು ನೀಡಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಸುದ್ದಿ ಆಗಿದೆ. ಈ ಕುರಿತು ವರದಿ ಮಾಡಲು ತೆರಳಿದ್ದ ಖಾಸಗಿ ಮಾಧ್ಯಮದ ವರದಿಗಾರರ ಮೇಲೆ ಮೋಹನ್ ಬಾಬು ಅವರು ಹಲ್ಲೆ ಮಾಡಿದ್ದಾರೆ. ಸದ್ಯ ಅವರ ವರ್ತನೆಗೆ ಖಂಡನೆ ವ್ಯಕ್ತವಾಗುತ್ತಿದೆ.
PublicNext
11/12/2024 01:18 pm