ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪ್ಯಾಚ್‌ ವರ್ಕಾದ್ರೂ ಸರಿಯಾಗಿ ಮಾಡಿ.. ಇದರಲ್ಲೂ ಮೋಸಾನಾ?

ಧಾರವಾಡ: ಹಾ ನಮಸ್ಕಾರ್ರಿಪಾ.. ನೋಡ್ರಿ ಇಲ್ಲಿ ಇದು ಧಾರವಾಡದಿಂದ ವಾಯಾ ಯಾದವಾಡ, ಉಪ್ಪಿನ ಬೆಟಗೇರಿ ಮ್ಯಾಲ ಮುಂದ ಬೈಲಹೊಂಗಲಕ್ಕ ಸಂಪರ್ಕ ಕಲ್ಪಿಸೋ ರಸ್ತೆ. ಇದು ದಾಖಲೆ ಪತ್ರದೊಳಗೆ ರಾಜ್ಯ ಹೆದ್ದಾರಿ ಅಂತ ಐತಿ. ಅದ ಇರ್ಲಿ. ಈಗ ಈ ರಸ್ತೆದಾಗ ದೊಡ್ಡು ದೊಡ್ಡು ಗುಂಡಿ ಬಿದ್ದಿದ್ದು. ಅವುಗಳನ್ನ ರಿಪೇರಿ ಮಾಡು ಕೆಲಸಾ ನಡದೈತಿ. ಹೆಂಗ ರಸ್ತೆ ರಿಪೇರಿ ಮಾಡಾಕತ್ತಾರ ಪಾ ಅಂದ್ರ ಒಂದ ಸಲಾ ನೋಡ್ಕೊಂಡ ಬಂದ ಬಿಡ್ರಿ.

ಹಾ ನೋಡಿದ್ರೆಲ್ಲ. ಈ ರಸ್ತೆ ರಿಪೇರಿ ಹೆಂಗ ನಡದೈತಿ ಅಂತ. ರಸ್ತೆದಾಗ ಬಿದ್ದಿದ್ದ ಒಂದ ಗುಂಡಿ ಮುಚ್ಚಾರ. ಅದರ ಬಾಜುನ ಇದ್ದ ಮತ್ತೊಂದು ಗುಂಡಿ ಕಂಡೂ ಕಾಣದಂಗ ಹಾ ನಡೀರಿ ಮುಂದ ಅನಕೋಂತ ಹೋಗ್ಯಾರ. ಅಲ್ರೀ. ರಸ್ತೆದಾಗಿನ ಗುಂಡಿ ಮುಚ್ಚೋ ಕೆಲಸಾ ಏನೋ ಮಾಡಾಕತ್ತೀರಿ. ಆದ್ರ ಇಷ್ಟ ಬೇಕಾಬಿಟ್ಟಿ ಕೆಲಸ ಮಾಡೋದು ಯಾಕಂತ?

ಧಾರವಾಡದಿಂದ ಮುಂದ ಬೈಲಹೊಂಗಲ ರಸ್ತೆ ಮಟಾ ಅಂದಾಜ 22 ಕಿಲೋ ಮೀಟರ್ ರಸ್ತೆ ಪ್ಯಾಚ್ ವರ್ಕ್ ಮಾಡಾಕ 40 ಲಕ್ಷ ರೂಪಾಯಿ ಬಿಡುಗಡೆ ಆಗೇತಂತ್ರಿ. ಧಾರವಾಡದಿಂದ ಈಗಾಗಲೇ ಯಾದವಾಡ ದಾಟಿ ಗುಂಡಿ ಮುಚಗೋಂತ ಹೋಗ್ಯಾರ. ನಡು ನಡು ಅದೇನೋ ಹುಲ್ಲಾಗಿನ ನಾಯಿ ಏನೋ ತಿಂದಿತ್ತ ಅಂತಾರಲ್ಲ ಹಂಗ ಪ್ಯಾಚ್ ವರ್ಕ್ ಮಾಡ್ಕೊಂತ ಹೋಗ್ಯಾರ. ಕೆಲವೊಂದಿಷ್ಟ ಕಡೆ ಡಾಂಬರ ಎಣ್ಣಿ ಹಾಕಿದ್ದ ಗುಂಡಿ ಸದೆ ಮುಚ್ಚಿಲ್ಲ. ಹಂಗ ಬರಾ ಬರಾ ಬರಾ ಎತ್ತ ತಿಳಿತೈತಿ ಅತ್ತ ಕಣ್ಣಿಗೆ ಕಂಡಷ್ಟ ಗುಂಡಿ ಮುಚಗೋಂತ ಹೋಗ್ಯಾರ.

ಇದನ್ನ ನಮ್ಮ ಕಾಂಟ್ಯಾಕ್ಟರ್ ಸಾಹೇಬ್ರಿಗೆ ಕೇಳಿದ್ರ, ನಮಗ ದೊಡ್ಡು ಗುಂಡಿ ಅಷ್ಟ ಮುಚ್ರಿ ಅಂತ ಹೇಳ್ಯಾರ್ರಿ. ಹಂಗೇನರ ಉಳದಿದ್ರ ಹೇಳ್ರಿ ಬೇಕಾದ್ರ ಅವನ್ನೂ ಮುಚ್ಚೋಣಂತ ಅಂತಾರ. ಅಲ್ರೀ ಸಾಹೇಬ್ರ ಒಂದ ಕಡೆ ಗುಂಡಿ ಮುಚ್ಚೀರಿ. ಅದರ ಬಾಜುನ ಇದ್ದ ಮತ್ತೊಂದ ಗುಂಡಿ ಹಂಗ ಬಿಟ್ಟ ಹೋಗೀರಿ. ಇದೇನ್ರಿ ನೀವು ಮಾಡೋ ಕೆಲಸಾ? ಮುಂದ ಎರಡ ತಿಂಗಳದಾಗ ಅಂದ್ರ ಆ ಗುಂಡಿಗೋಳು ಬಾಯಿ ತಕ್ಕೊಂಡ ನಿಲ್ತಾವ. ಹಿಂಗಾದ್ರ ಬಾಳೆ ಹೆಂಗ ಅಂತ? ನೋಡ್ರಿ ಪಿಡಬ್ಲುಡಿ ಅಧಿಕಾರಿಗೋಳ ಇದರ ಕಡೆ ಸ್ವಲ್ಪ ಗಮನಾ ಕೊಡಬೇಕ. ಈ ಕ್ಷೇತ್ರದ ಶಾಸಕರಾದಂತ ವಿನಯ್ ಕುಲಕರ್ಣಿ ಸಾಹೇಬ್ರು ಅಧಿಕಾರಿಗಳಿಗೆ ತಾಕೀತ ಮಾಡಿ ರಸ್ತೆ ಗುಂಡಿ ಮುಚ್ಚೋ ಕೆಲಸ ಅಚ್ಚುಕಟ್ಟಾಗಿ ಆಗುವಂಗ ಮಾಡಬೇಕಾಗೇತಿ ನೋಡ್ರಿ. ನೋಡುಣ ಇದು ಮುಂದ ಏನ ಅಕ್ಕತ್ಯೋ ಅಂತಾ ಕಾದು ನೋಡೋಣ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/12/2024 10:38 pm

Cinque Terre

17.53 K

Cinque Terre

2

ಸಂಬಂಧಿತ ಸುದ್ದಿ