ಹುಬ್ಬಳ್ಳಿ: ಪತ್ನಿಯ ಮೇಲೆ ಅನುಮಾನ ಪಟ್ಟು ಪತಿಯೇ ಕೊಲೆ ಮಾಡಿದ ಪ್ರಕರಣ ಸಾಬೀತಾಗಿದ್ದು, ಈ ವಿಚಾರಣೆ 1ನೇ ಅಧಿಕ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಮಾರ್ಚ್ 30ಕ್ಕೆ ತಿಳಿಸಲಾಗುತ್ತದೆ.
ಕೇಶ್ವಾಪುರ ವ್ಯಾಪ್ತಿ ಚಾಲುಕ್ಯ ರಸ್ತೆ ನಿವಾಸಿ ಕಿಶೋರ ಬಮ್ಮಾಜಿ (31) ಎಂಬಾತ ಕೊಲೆಗೈದ ಅಪರಾಧಿ. 2018ರ ಮಾ. 23ರಂದು ಪತ್ನಿಯಾದ ಲೆವಿನಾ ಬಮ್ಮಾಜಿ (24) ಇವಳ ಮೊಬೈಲ್‌ಗೆ ಬೇರೆ ವ್ಯಕ್ತಿಯ ಕರೆ ಬಂದ ಕಾರಣ ಅವಳ ಮೇಲೆ ಸಂದೇಹ ಪಟ್ಟು ಮೊದಲು ಸ್ಟೀಲ್ ಪೊರಕೆಯಿಂದ ಹಲ್ಲೆ ಮಾಡಿದ್ದ. ನಂತರ ವಾಟರ್ ಹೀಟರ್ ವಾಯರ್ ತೆಗೆದುಕೊಂಡು ಕತ್ತಿಗೆಗೆ ಸುತ್ತಿ ಕೊಲೆ ಮಾಡಿದ್ದ.
ಯಾರಿಗೂ ತಿಳಿಯದಂತೆ ಸಾಕ್ಷಿಗಳನ್ನು ನಾಶ ಪಡಿಸಿ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ರೀತಿ ಯೋಜನೆ ಮಾಡಿ ಅವಳನ್ನು ನೇಣು ಹಾಕಿಕೊಂಡಿದ್ದಾಳೆ ಎಂದು ನಂಬಿಸಲು ಸ್ವತಃ ತಾನೇ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾನೆ. ಇದಾದ ಬಳಿಕ ಯುವತಿಯ ತವರು ಮನೆಯವರು ಬಂದು ಮಗಳ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ ಮಾಡಲಾಗಿದೆ ಎಂದು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ನಂತರ ವೈದ್ಯಕೀಯ ತಪಾಸಣೆಯಿಂದ ಕೊಲೆ ಮಾಡಲಾಗಿದೆ ಎಂದು ತಿಳಿದು ಬರುತ್ತದೆ. ಅಂದಿನ ಪೊಲೀಸ್ ಅಧಿಕಾರಿ ಡಿ. ಆರ್. ಗಡ್ಡೆಕರ ದೋಷಾರೋಪಗಳನ್ನು ನ್ಯಾಯಾಲಕ್ಕೆ ಸಲ್ಲಿಕೆ ಮಾಡಿರುತ್ತಾರೆ. ಸರ್ಕಾರ ಪರ ಅಭೀಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದಾರೆ.
ಹಿನ್ನೆಲೆ: ಕೇಶ್ವಾಪುರ ವಿನೂತನ ಕಾಲೋನಿ ನಿವಾಸಿ ಕಿಶೋರ ಬಮ್ಮಾಜಿ ಆಂಧ್ರ ಪದ್ರೇಶದ ಗುಂಟುರ ಜಿಲ್ಲಾ ತಾಡಪಲ್ಲಿ ಲೆವಿನಾ ಎಂಬಾಕೆಯನ್ನು 2011 ರಲ್ಲಿ ಮದುವೆಯಾಗಿರುತ್ತಾನೆ. ಪತಿ ಕಿಶೋರ ಸೇರಿ ಅವರ ಕುಟುಂಬಸ್ಥರು ಅವಳ ಮೇಲೆ ಸಂದೇಹ ಪಡುತ್ತಾರೆ. ಅದಕ್ಕಾಗಿ ಕಿಶೋರ ಅವಳಳೊಂದಿಗೆ ಬೇರೆ ಮನೆ ಮಾಡಿ ಬಂದು ವಾಸವಾಗಿರುತ್ತಾರೆ. ಅಷ್ಟಾದರೂ ಅವಳ ಮೇಲೆ ಮತ್ತೆ ಸಂದೇಹ ಪಟ್ಟು ಹಲ್ಲೆ ಮಾಡುತ್ತಾನೆ. ಇದಕ್ಕೆ ಬೆಸರಗೊಂಡು ಅವಳು ತವರುಮನೆಗೆ ಹೋಗುತ್ತಾಳೆ. ಇಲ್ಲಸಲ್ಲದ ಹೇಳಿ ಅವಳನ್ನು ಮತ್ತೆ ಕರೆದುಕೊಂಡು ಬಂದಿರುತ್ತಾನೆ. 2018 ಮಾರ್ಚ್ 23ರಂದು ಮಧ್ಯಹ್ನ 1:30 ಕ್ಕೆ ಅವಳ ಮೊಬೈಲ್‌ಗೆ ಬೇರೆ ವ್ಯಕ್ತಿಯ ಕರೆ ಬಂದಿದೆ ಎಂದು ಅನುಮಾನ ಪಟ್ಟು ಕೊಲೆ ಮಾಡಿದ್ದಾನೆ.
Kshetra Samachara
29/03/2022 10:56 am