ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಸೆಂಬರ್‌ 20ರಂದು ತೆರೆಗೆ ಬರಲಿದೆ ಯುಐ ಸಿನಿಮಾ – ಬಾಲಿವುಡ್ ನಟ ಅಮೀರ್ ಖಾನ್‌ರಿಂದ ಶುಭ ಹಾರೈಕೆ

ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಸಿನಿಮಾ ಇದೇ ಡಿಸೆಂಬರ್‌ 20 ರಂದು ತೆರೆಕಾಣಲು ರೆಡಿಯಾಗಿದೆ . ಇದೀಗ ಯುಐ ಸಿನಿಮಾಗೆ ಬಾಲಿವುಡ್ ನಟ ಅಮೀರ್ ಖಾನ್ ಶುಭ ಹಾರೈಸಿದ್ದು ಆ ವಿಡಿಯೋವನ್ನು ಅಮೀರ್‌ ಖಾನ್‌ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನಟ ಉಪೇಂದ್ರ ಕೂಡ ಕಾಣಿಸಿಕೊಂಡಿದ್ದಾರೆ.

ನಾನು ಉಪೇಂದ್ರ ಅವರ ಅಭಿಮಾನಿ. ಅವರ ಯುಐ ಸಿನಿಮಾ ಇದೇ ಡಿ.20 ರಂದು ರಿಲೀಸ್‌ ಆಗಲಿದೆ. ಟ್ರೈಲರ್‌ ನೋಡಿದೆ. ನಿಜಕ್ಕೂ ಮನಸ್ಸಿಗೆ ಮುದ ನೀಡಿತು. ಟ್ರೈಲರ್‌ ನಿಜಕ್ಕೂ ಊಹಿಸಲು ಅಸಾಧ್ಯ. ಟ್ರೈಲರ್‌ ಶಾಕ್‌ ಕೂಡ ಆಯಿತು. ಹಿಂದಿ ಅಭಿಮಾನಿಗಳು ಇದನ್ನು ಇಷ್ಟ ಪಟ್ಟಿದ್ದಾರೆ. ಸಿನಿಮಾ ಮತ್ತು ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಅಮೀರ್‌ ಖಾನ್‌ ಶುಭಾಶಯ ತಿಳಿಸಿದ್ದಾರೆ. ಅಮೀರ್‌ ಖಾನ್‌ ಅವರ ಹಾರೈಕೆಗೆ ನಟ ಉಪೇಂದ್ರ ಕೃತಜ್ಞತೆ ತಿಳಿಸಿದ್ದಾರೆ.

Edited By : Somashekar
PublicNext

PublicNext

12/12/2024 05:41 pm

Cinque Terre

23.71 K

Cinque Terre

0