ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಲಿಕಾನ್ ಸಿಟಿಯನ್ನು ಹಾಡಿ ಹೊಗಳಿದ ಬಾಲಿವುಡ್ ನಟಿ ಸನ್ನಿ ಲಿಯೋನ್

ಸಿಲಿಕಾನ್ ಸಿಟಿಯ ವಾತಾವರಣ, ಆಹಾರ ,ಸಂಸ್ಕೃತಿ ಅದೇ ರೀತಿ ಬಹುಭಾಷಿಕರಿಗೆ ನೆಲೆನೀಡಿರುವ ಬೆಂಗಳೂರನ್ನು ಇಷ್ಟಪಡದವರೇ ಇಲ್ಲ. ಈ ವಿಚಾರದಲ್ಲಿ ಸಿನಿಮಾ ತಾರೆಯರು, ಕ್ರಿಕೆಟಿಗರು ಎಲ್ಲರೂ ನಮ್ಮ ಬೆಂಗಳೂರನ್ನು ಇಷ್ಟಪಡುತ್ತಾರೆ. ಇದೀಗ ಈ ಸಾಲಿಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಸೇರ್ಪಡೆಯಾಗಿದ್ದಾರೆ.

ಇತ್ತೀಚೆಗೆ ಖಾಸಗಿ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ನಟಿ ಸಿಲಿಕಾನ್ ಸಿಟಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ನಟಿ, ನಾನು ಬೆಂಗಳೂರನ್ನು ತುಂಬಾ ಇಷ್ಟಪಡುತ್ತೇನೆ. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಖುಷಿಯಾಗುತ್ತಿದೆ ಎಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ನೃತ್ಯದ ಮೂಲಕ ಎಲ್ಲರನ್ನು ರಂಜಿಸಿದ್ದಾರೆ. ಅವಕಾಶ ಸಿಕ್ಕರೆ ಮತ್ತೊಮ್ಮೆ ಕನ್ನಡದ ಒಳ್ಳೆಯ ಸಿನಿಮಾಗಳಿಗೆ ಖಂಡಿತವಾಗಿಯೂ ಮತ್ತೊಮ್ಮೆ ಅಭಿನಯಿಸುತ್ತೇನೆ ಎಂದು ಮನದ ಮಾತನ್ನು ವ್ಯಕ್ತಪಡಿಸಿದ್ದಾರೆ.

Edited By : Somashekar
PublicNext

PublicNext

12/12/2024 06:28 pm

Cinque Terre

13.33 K

Cinque Terre

0

ಸಂಬಂಧಿತ ಸುದ್ದಿ