ಹುಬ್ಬಳ್ಳಿ: ತನ್ನ ಮಗನ ಕಟಿಂಗ್ ಮಾಡುವ ಸಂಬಂಧವಾಗಿ ಸಲೂನ್‌ದಲ್ಲಿನ ಮೂವರನ್ನ ನವನಗರದ ಗಣ್ಯ ವ್ಯಕ್ತಿಯೊಬ್ಬ ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.
ಕಳೆದ ತಿಂಗಳಷ್ಟೇ ಪೊಲೀಸ್ ಕಮೀಷನರ್ ಸಮೇತ ಬಹುತೇಕ ನಾಯಕರನ್ನ ಕರೆದು ಕಾರ್ಯಕ್ರಮ ನಡೆಸಿದ್ದ ವಿಜಯಕುಮಾರ ಅಪ್ಪಾಜಿ ಎಂಬುವವರೇ, ಸಲೂನ್‌ದಲ್ಲಿನ ಕಾರ್ಮಿಕರಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿರುವುದು ಸಲೂನ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಷ್ಟೊಂದು ಅಮಾನವೀಯ ಘಟನೆ ಪೊಲೀಸ್ ಕಮೀಷನರ್ ಕಚೇರಿಯ ಕೂಗಳತೆ ದೂರದಲ್ಲಿ ನಡೆದಿದೆ. ಅಷ್ಟೇ ಅಲ್ಲ, ನವನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/12/2024 08:51 pm