ಈ ನಾಡು ಕಂಡ ಅಪ್ರತಿಮ ನಾಯಕ, ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದ್ಧಿ ಎಸ್.ಎಂ ಕೃಷ್ಣ ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅಗಲಿದ ಧೀಮಂತ ನಾಯಕನಿಗೆ ಭಾವಪೂರ್ಣ ವಿದಾಯ ಹೇಳಲಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆಯಲ್ಲಿ ಎಸ್ಎಂ ಕೃಷ್ಣ ಅವರ ಪಾತ್ರ ತುಂಬಾನೆ ಇದೆ. ಗುರು-ಶಿಷ್ಯರಾದ ಇವರು ಬಳಿಕ ಸಂಬಂಧಿಕರಾದ್ರು.ಎಸ್.ಎಂ ಕೃಷ್ಣ ಅವ್ರ ಪಾಲಿಗೆ ಡಿಕೆ ಶಿವಕುಮಾರ್ ಬರೀ ಬೀಗರಲ್ಲ. ಮನೆಮಗನಂತೆ ಕುಟುಂಬದ ಜೊತೆ ನಿಂತವರು. ಕೃಷ್ಣ ಅವರ ಮನೆಗೆ ಮಗಳನ್ನೇ ಧಾರೆ ಎರೆದು ಕೊಟ್ಟವರು. ಕೃಷ್ಣ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ರೂ ಗುರುವಿನ ಮೇಲಿನ ಡಿಕೆ ನಿಯತ್ತು ಮಾತ್ರ ಕಮ್ಮಿಯಾಗಿರಲಿಲ್ಲ. ಹೀಗಾಗಿ ತಾವೊಬ್ಬ ಡಿಸಿಎಂ ಎನ್ನುವುದನ್ನು ಮರೆತು ಎಸ್ಎಂ ಕೃಷ್ಣರ ಶಿಷ್ಯನಾಗಿ ನಿನ್ನೆ ಕೈಯಲ್ಲಿ ಮೈಕ್ ಹಿಡಿದು ಅಂತ್ಯಕ್ರಿಯೆಯ ಎಲ್ಲ ಕಾರ್ಯವನ್ನು ನಿರ್ವಹಿಸಿದ ಡಿಕೆ ಶಿವಕುಮಾರ್, ಗುರುವಿಗೆ ಹೆಗಲು ನೀಡಿ ಅಂತಿಮ ವಿದಾಯ ಹೇಳಿದರು.
ಇನ್ನು ಎಸ್ಎಂ ಕೃಷ್ಣ ಉಸಿರು ನಿಲ್ಲಿಸಿದ ಬಳಿಕ ಅವರನ್ನು ಗೌರವಪೂರ್ವಕವಾಗಿ ಕಳುಹಿಸಿಕೊಡುವವರೆಗೆ ಡಿಕೆಶಿ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ.
ಎಸ್ಎಂ ಕೃಷ್ಣ ಅವರ ಗರಡಿಯಲ್ಲೇ ಬೆಳೆದ ಡಿಕೆ ಶಿವಕುಮಾರ್, ಗುರುಗೆ ಕಣ್ಣೀರ ವಿದಾಯ ಹೇಳಿದ್ದಾರೆ. ನನ್ನ ಅವರ ಸಂಬಂಧ ತಂದೆ ಮಗನ ಸಂಬಂಧ ಇದ್ದಂತೆ ಎಂದು ತಮ್ಮ ನಾಯಕನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟಿದ್ದ ಡಿಕೆಶಿ ಕಣ್ಣೀರಿಡುತ್ತಾಲೇ ಎಲ್ಲವನ್ನೂ ನಿರ್ವಹಿಸಿದ್ರು.ದ್ದಾರೆ.
ಅಳಿಯನನ್ನು ಕಳೆದುಕೊಂಡಾಗ ಬಂಡೆಯಂತೆ ನಿಂತರು. ಗಂಡು ಮಕ್ಕಳಿಲ್ಲದ ಎಸ್.ಎಂ ಕೃಷ್ಣಗೆ ಮನೆಮಗನಾದರು. ಕೃಷ್ಣ ಮೊಮ್ಮಗನಿಗೆ ಮಗಳನ್ನೇ ಧಾರೆ ಎರೆದು ಕೊಟ್ಟರು. ಈಗ ಅವರು ನಿಧನದ ಬಳಿಕ ಬಂಡೆಯಂತೆ ಮುಂದೆ ನಿಂತು ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಸಿಕೊಟ್ಟಿದ್ದಾರೆ.
ತಾತನ ಚಿತೆಗೆ ಮೊಮ್ಮಗ ಅಗ್ನಿ ಸ್ಪರ್ಶ ಮಾಡಿದ ಬಳಿಕ ಎಸ್.ಎಂ ಕೃಷ್ಣ ಅವರು ಪಂಚಭೂತಗಳಲ್ಲಿ ಲೀನರಾದರು.
PublicNext
12/12/2024 08:44 am