ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಯಿ ಸರಸ್ವತಿಗೆ ಅವಮಾನ: ಸಂಗೀತ ಕಾರ್ಯಕ್ರಮದಿಂದ ಮಧ್ಯದಲ್ಲೇ ಎದ್ದು ಹೋದ ರಾಜಸ್ಥಾನ ಸಿಎಂ ವಿರುದ್ಧ ಸೋನು ಗರಂ

ಜೈಪುರ: ತಮ್ಮ ಸಂಗೀತ ಕಾರ್ಯಕ್ರಮದಿಂದ ಮಧ್ಯದಲ್ಲಿಯೇ ಎದ್ದು ಹೋದ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಮತ್ತು ಇತರ ನಾಯಕರ ವಿರುದ್ಧ ಖ್ಯಾತ ಗಾಯಕ ಸೋನು ನಿಗಮ್ ಅಸಮಾಧಾನ ಹೊರಹಾಕಿದ್ದಾರೆ.

ಮೂರು ದಿನಗಳ ‘ರೈಸಿಂಗ್ ರಾಜಸ್ಥಾನ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಶೃಂಗಸಭೆ’ಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗಾಗಿ ಹೋಟೆಲ್ ರಾಂಬಾಗ್ ಪ್ಯಾಲೇಸ್‌ನಲ್ಲಿ ಸಾಂಸ್ಕೃತಿಕ ಸಂಜೆಯ ಭಾಗವಾಗಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಸೇರಿದಂತೆ ಇತರೆ ಗಣ್ಯರು ಸಂಗೀತ ಕಾರ್ಯಕ್ರಮದಿಂದ ಮಧ್ಯದಲ್ಲಿಯೇ ಎದ್ದು ಹೋಗಿದ್ದರು. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ 51 ವರ್ಷದ ಸೋನು, ಜನಪ್ರತಿನಿಧಿಗಳ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಸೋನು ನಿಗಮ್ ಅವರು, 'ನಾನು ಜೈಪುರದಲ್ಲಿದ್ದು ಈಗಷ್ಟೆ ಸಂಗೀತ ಕಚೇರಿ ಮುಗಿಸಿ ಬರುತ್ತಿದ್ದೇನೆ. ಕಾರ್ಯಕ್ರಮ ರೈಸಿಂಗ್ ರಾಜಸ್ಥಾನದ ಹೆಸರಿನಲ್ಲಿತ್ತು. ತುಂಬಾ ಚೆನ್ನಾಗಿತ್ತು, ತುಂಬಾ ಒಳ್ಳೆಯವರು ಬಂದಿದ್ದರು. ರಾಜಸ್ಥಾನದ ಹೆಮ್ಮೆಯನ್ನು ಹೆಚ್ಚಿಸಲು ಪ್ರತಿ ಮೂಲೆಯಿಂದಲೂ ಪ್ರತಿನಿಧಿಗಳು ಬಂದಿದ್ದರು. ಸಿಎಂ ಆಗಿದ್ದ ಭಜನ್ ಲಾಲ್ ಶರ್ಮಾ ಅವರು ಕ್ರೀಡಾ ಸಚಿವರೂ ಆಗಿದ್ದರು. ಬಹಳ ಜನ ಸೇರಿದ್ದೂ ನಾನು ಕತ್ತಲೆಯಲ್ಲಿ ಎಲ್ಲರನ್ನು ನೋಡಲಾಗಲಿಲ್ಲ. ಆದರೆ ಕಾರ್ಯಕ್ರಮದ ಮಧ್ಯೆ ನಾನು ನೋಡಿದಾಗ ಸಿಎಂ ಸಾಹೇಬರು ಮತ್ತೊಬ್ಬರು ಎದ್ದು ಹೋದರು. ಅವರು ಹೋದ ಕೂಡಲೇ ಎಲ್ಲ ಪ್ರತಿನಿಧಿಗಳೂ ಹೊರಟು ಹೋದರು' ಎಂದು ಹೇಳಿದ್ದಾರೆ.

ನೀವು ಕಲಾವಿದರನ್ನು ಗೌರವಿಸದಿದ್ದರೆ ಹೊರಗಿನ ಜನರು ಏನು ಮಾಡುತ್ತಾರೆ ಎಂದು ನಾನು ಎಲ್ಲರನ್ನು ವಿನಂತಿಸುತ್ತೇನೆ. ಅಮೆರಿಕದಲ್ಲಿ ಯಾರಾದರೂ ಪ್ರದರ್ಶನ ನೀಡುವಾಗ ಅಲ್ಲಿನ ಅಧ್ಯಕ್ಷರು ಎದ್ದು ಹೋಗುವುದನ್ನು ಇದುವರೆಗೆ ನೋಡಿಲ್ಲ. ಕಾರ್ಯಕ್ರಮದ ಮಧ್ಯೆ ಹೋಗಬೇಕಾದರೆ ಒಂದೋ ಬರಬೇಡಿ ಅಥವಾ ಕಾರ್ಯಕ್ರಮ ಪ್ರಾರಂಭವಾಗುವ ಮೊದಲೇ ಹೋಗಿ ಬಿಡಿ ಎಂದು ಹೇಳಿದ್ದಾರೆ.

'ಯಾವುದೇ ಕಲಾವಿದರ ಅಭಿನಯದ ಮಧ್ಯೆ ಎದ್ದು ಹೋಗುವುದು ಸರಸ್ವತಿಗೆ ಮಾಡಿದ ಅವಮಾನ. ನಾನು ಇದನ್ನು ಗಮನಿಸಲಿಲ್ಲ, ಆದರೆ ನೀವು ಹೋದ ನಂತರ, ನನಗೆ ಕೆಲವರು ಇಂತಹ ಕಾರ್ಯಕ್ರಮಗಳನ್ನು ಮಾಡಬೇಡಿ ಎಂದು ಎಲ್ಲರಿಂದಲೂ ಸಂದೇಶಗಳು ಬಂದವು. ನೀವು ಹೋಗಬೇಕಾದರೆ ಪ್ರದರ್ಶನದಲ್ಲಿ ಕುಳಿತುಕೊಳ್ಳಬೇಡಿ, ಮುಂಚಿತವಾಗಿ ಹೋಗಿ ಎಂದು ನನ್ನ ವಿನಂತಿ. ನೀವು ಹುಡುಗರೇ ಗ್ರೇಟ್. ನೀವು ತುಂಬಾ ಕೆಲಸ ಮಾಡಿದ್ದೀರೀ ಎಂದು ಹೇಳಿದರು.

ನೀವು ಮಧ್ಯದಲ್ಲಿ ಎದ್ದು ಈ ರೀತಿ ಹೋಗಬೇಕಾದರೆ ದಯವಿಟ್ಟು ಯಾವುದೇ ಕಲಾವಿದರ ಪ್ರದರ್ಶನಕ್ಕೆ ಹಾಜರಾಗಬೇಡಿ ಎಂದು ನಾನು ಭಾರತದ ಎಲ್ಲಾ ರಾಜಕಾರಣಿಗಳಲ್ಲಿ ವಿನಂತಿಸುತ್ತೇನೆ. ಇದು ಕಲೆ, ಕಲಾವಿದೆ ಮತ್ತು ತಾಯಿ ಸರಸ್ವತಿಗೆ ಮಾಡಿದ ಅಗೌರವ ಎಂದು ಬರೆದಿದ್ದಾರೆ.

Edited By : Vijay Kumar
PublicNext

PublicNext

11/12/2024 11:08 pm

Cinque Terre

8.8 K

Cinque Terre

2