ಕುಂದಗೋಳ : ಅನ್ನದಾತನ ತೋಟಕ್ಕೆ ಕನ್ನ ಹಾಕಿದ ದುಷ್ಕರ್ಮಿಗಳು ತೋಟದಲ್ಲಿ ಬೆಳೆದಂತಹ ಗಿಡಗಳನ್ನು ಕಳ್ಳತನ ಮಾಡಿರುವ ದುಷ್ಕೃತ್ಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ನಡೆದಿದೆ.
ಹೌದು ! ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ 209/9 ಮತ್ತು 209/10 ಸರ್ವೇ ನಂಬರ್ ಜಮೀನಿನ ತೋಟದಲ್ಲಿ ರೈತ ಬೆಳೆದ 30 ಸಾವಿರ ಮೌಲ್ಯದ ಬಿದಿರಿನ ಮರ, 5 ಸಾವಿರ ಮೌಲ್ಯದ ಅಕೆಶಿಯಾ ಗಿಡ, 15 ಸಾವಿರ ತೆಂಗಿನಮರ, 50 ಸಾವಿರ ಮೌಲ್ಯದ ಗಂಧದ ಮರಗಳನ್ನು ನೂಲ್ವಿ ಗ್ರಾಮದ ಮಲ್ಲೇಶಪ್ಪ ಗಂಗಪ್ಪ ಅಂಗಡಿ, ಹಿರೇಹರಕುಣಿ ಗ್ರಾಮದ ಯಲ್ಲಪ್ಪ ವೀರಪಾಕ್ಷಪ್ಪ ಕುರಟ್ಟಿ ಎಂಬುವವರು ಕಳ್ಳತನ ಮಾಡಿದ್ದಾರೆ.
ಒಟ್ಟು ಅಂದಾಜು 1 ಲಕ್ಷ ಮೌಲ್ಯದ ಗಿಡಗಳನ್ನು ಕಳ್ಳತನ ಮಾಡಿದ್ದಾರೆ. ಈ ಪ್ರಕರಣ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Kshetra Samachara
12/12/2024 12:52 pm