ಹುಬ್ಬಳ್ಳಿ: ನಮಸ್ಕಾರ ರೀ ಪಾ ಪಬ್ಲಿಕ್ ನೆಕ್ಸ್ಟ್ ಮಂದಿಗೆ. ನಮ್ ಹುಬ್ಳಿ ಧಾರವಾಡ ಮಸ್ತ್ ಬೆಳ್ಯಾಕತೈತಿ. ಅಂಗ್ ಸ್ಕ್ಯಾಮ್ ಮಾಡೋರ ಜಾಸ್ತಾ ಆಗ್ಯಾರ ರೀ. ಎಲ್ರೂ ಹುಷಾರ್ ಆಗಿರಿ ಪಾ. ಪೊಲೀಸ್ ಡಿಪಾರ್ಟ್ಮೆಂಟ್ ಎಷ್ಟ ಅವರ್ನೆಸ್ ಮೂಡಿಸಿದ್ರು ಕೆಲವೊಬ್ರಿಗೆ ಬುದ್ದಿನ ಬರ್ತಿಲ್ಲಾ ನೋಡ್ರಿ.
ಹೌದು,,,, ಇತ್ತಿಚ್ಚಿನ ದಿನದಾಗ ಶ್ಯಾನೆ ಮಂದಿನ ಲಾಭದ ಆಶೆಕ ಬಿದ್ದ ಲಕ್ಷ ಲಕ್ಷ ಗಟ್ಟಲೇ ರೊಕ್ಕಾ ಕಳ್ಕೊತ್ತಿದ್ದಾರ.... ಫೇಕ್ ಆ್ಯಪ್, ವಾಟ್ಸ್ ಆಪ್ ಗ್ರೂಪ್, ಟೆಲಿಗ್ರಾಮ್, ಇಂತದ್ರಾಗ ಯಾರೊ ಗೊತ್ತಿಲ್ಲಾರ್ದವರು ಗ್ರೂಪ್ ಮಾಡಿ ನಿಮ್ಮ ಮೊಬೈಲ್ ನಂಬರ ಆ್ಯಡ್ ಮಾಡಿ, ಮಾರ್ಕೆಟಿಂಗ್ ಮಾಡಾಕತೈವಿ, ನೀವು ಒಂದ ದಿನಕ್ಕ ಸಾವಿರಾರು ರೂಪಾಯಿ, ತಿಂಗಳಿಗ ಲಕ್ಷಾಂತರ ರೂಪಾಯಿ ರೊಕ್ಕಾ ಮಾಡಬಹುದು ಅಂತ ನಿಮಗೆಲ್ಲ ಆಶೆ ತೋರಿಸಿ, ಯಾಮಾರ್ಸಾಕತ್ತಾರ ರೀ ಪಾ ಅದಕ್ ಸ್ವಲ್ಪ ಹುಷಾರ್ ಆಗಿರಿ. ಈ ಸೈಬರ್ ವಂಚನೆ ಬಗ್ಗೆ ನಮ್ಮ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಸಾಹೇಬ್ರ ಈ ವಂಚಕರು ಹೆಂಗ್ ರೊಕ್ಕದ ಆಶೆ ತೋರಿಸಿ ಯಾಮಾರಸ್ತಾರಂತ ಮಸ್ತ್ ಮಾಹಿತಿ ನಿಡ್ಯಾರ ನೋಡ್ರಿ ಒಂದ ಸಾರಿ.
ಪೊಲೀಸ್ ಕಮಿಷನರ್ ಏನ ಹೇಳಿದ್ರ ಅಂತ ಕೇಳಿದ್ರಲ್ಲ. ಇನ್ಮುಂದ ಆದ್ರು ಎಚ್ಚರಿಕೆ ಇಂದ ಇರ್ರಿ. ದುಡಿದಿದ್ದ ನಿಲ್ಲಲ್ಲಾ ಇನ್ನ ಬ್ಯಾರೆ ರೊಕ್ಕಾ ಎಲ್ಲೆ ನಿಲ್ಲತ್ ನೀವ ತಿಳ್ಕೊರಿ. ಜಾಸ್ತಿ ಆಶೆಗೆ ಬಿದ್ದ ಕಷ್ಟ ಪಟ್ಟ ದುಡಿದ್ದ ರೊಕ್ಕಾ ಹಾಳ ಮಾಡ್ಕೊಬ್ಯಾಡ್ರಿ ಅನ್ನೊದ ಪಬ್ಲಿಕ್ ನೆಕ್ಸ್ಟ್ ಕಳಕಳ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/12/2024 04:03 pm