ಧಾರವಾಡ: ಮಹಿಳೆಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದ ಇಬ್ಬರನ್ನು ಧಾರವಾಡ ಉಪನಗರ ಠಾಣೆಯ ಪೊಲೀಸರು ಬಂಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ಬೆಳಗಾವಿ ರಸ್ತೆಯಲ್ಲಿರುವ ತಂಪು ಪಾನೀಯ ತಯಾರಿಸುವ ನೆಕ್ಟರ್ ಬೆವರೇಜಸ್‌ನಲ್ಲಿ ಈ ಘಟನೆ ನಡೆದಿದ್ದು, ಬಂಧಿತರು ನೆಕ್ಟರ್ ಬೆವರೇಜಸ್‌ನ ಉದ್ಯೋಗಿಗಳು.
ಅಲ್ಲಿಯೇ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯನ್ನು ಆರೋಪಿತರು, ಕೆಲಸದ ಸಮಯದಲ್ಲಿಯೇ ಆಕೆಯನ್ನು ತಮ್ಮ ದಾಹ ತೀರಿಸಿಕೊಳ್ಳಲು ಒತ್ತಾಯಿಸಿದ್ದಾರೆ. ಆದರೆ, ಆ ಮಹಿಳೆ ಒಪ್ಪದಿದ್ದಾಗ ಆಕೆಯನ್ನು ಬಲವಂತದಿಂದ ಎಳೆದಾಡಿದ್ದಾರೆ.
ಆಗ ಅಕೆ ಅಲ್ಲಿಯೇ ಸಮೀಪದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇತರ ಕಾರ್ಮಿಕರ ನೆರವಿನಿಂದ ತಪ್ಪಿಸಿಕೊಂಡಿದ್ದಾಳೆ. ನಂತರ ಆಕೆ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿತರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಬ್ಬರ ಪೈಕಿ ಇದೀಗ ಒಬ್ಬರಿಗೆ ಜಾಮೀನು ಕೂಡ ಮಂಜೂರಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/03/2022 04:15 pm