ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಡ್ಡಗಟ್ಟಿ ದರೋಡೆ

ಅಣ್ಣಿಗೇರಿ: ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಗದಗ ಮಾರ್ಗ ಮಧ್ಯೆ ಅಣ್ಣಿಗೇರಿ ಮತ್ತು ಭದ್ರಾಪುರ ನಡುವೆ ಆರ್ಯರ ಪೂಲದ ಹತ್ತಿರ ರಾತ್ರಿ 8.30 ಯಿಂದ 9 ಗಂಟೆಯ ಸುಮಾರಿಗೆ ದರೋಡೆ ನಡೆದಿರುತ್ತದೆ.

ಗದಗ ಮಾರ್ಗದಿಂದ ಹುಬ್ಬಳ್ಳಿ ಮಾರ್ಗ ಕಡೆ ಬರುತ್ತಿರುವ ಬೇಕರಿ ವಾಹನವನ್ನು ಟಾಟಾ ಏಸ್ ವಾಹನದಲ್ಲಿ ಬಂದ ನಾಲ್ಕು ಜನ ವಾಹನವನ್ನು ಅಡ್ಡಗಟ್ಟಿ ವಾಹನ ಚಾಲಕನಿಗೆ ಹಾಗೂ ಸೂಪರ್ವೈಸರ್ ಗೆ ಕಣ್ಣಲ್ಲಿ ಕಾರದಪುಡಿ ಹಾಕಿ ಸುತ್ತಿಗೆಯಿಂದ ದೇಹದ ಭಾಗಗಳಿಗೆ ಹೊಡೆದು ಗಂಭೀರ ಗಾಯ ಮಾಡಿ 1 ಲಕ್ಷ 22 ಸಾವಿರ ಹಣವನ್ನು ದೋಚಿಕೊಂಡು ಜೊತೆಗೆ ವಾಹನದ ಕೀಯನ್ನು ತೆಗೆದುಕೊಂಡು ಹೋಗಿರುತ್ತಾರೆ.

ಇನ್ನೂ ಸುದ್ದಿ ತಿಳಿದು ಘಟನಾಸ್ಥಳಕ್ಕೆ ಆಗಮಿಸಿದ ಸಿಪಿಐ ಮಠಪತಿ ಹಾಗೂ ಪಿಎಸ್ಐ ಲಾಲಸಾಬ್ ಜೂಲಕಟ್ಟಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಶೋಧಕಾರ್ಯವನ್ನು ಮುಂದುವರಿಸುತ್ತಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/03/2022 06:20 pm

Cinque Terre

125.84 K

Cinque Terre

4

ಸಂಬಂಧಿತ ಸುದ್ದಿ