ಹುಬ್ಬಳ್ಳಿ : ಬಸ್ ಹತ್ತುವ ವೇಳೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿರುವ ಘಟನೆ ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಲ್ಲಿ ನಡೆದಿದೆ.
ಹುಬ್ಬಳ್ಳಿ-ಗದಗ ಬಸ್ ನಲ್ಲಿ ನಡೆದ ಘಟನೆಯಾಗಿದ್ದು, ಬಸ್ ಹತ್ತುತ್ತಿದ್ದ ಮಹಿಳೆಯ 2.30 ಲಕ್ಷ ಮೌಲ್ಯದ 50 ಗ್ರಾಂ ಮಾಂಗಲ್ಯ ಸರ ಮತ್ತು ಬಳೆ ಕಳ್ಳತನ ಮಾಡಿದ್ದಾರೆ.
ಬೈರಿದೇವರಕೊಪ್ಪದ ಶಾಂತಾದೇವಿ ಮದಗುಣಿಕಿ ಆಭರಣ ಕಳೆದುಕೊಂಡ ಮಹಿಳೆಯಾಗಿದ್ದು, ಹೊಸೂರು ನಿಲ್ದಾಣದಲ್ಲಿ ಬಸ್ ಹತ್ತುವಾಗ ಕಳ್ಳರ ಕೈಚಳಕ ತೋರಿದ್ದಾರೆ. ಗದಗ ಬಸ್ ಹತ್ತುತ್ತಿದ್ದ ವೇಳೆ 1.50 ಲಕ್ಷ ಮೌಲ್ಯದ ಮಾಂಗಲ್ಯಸರ ಹಾಗೂ 20 ಗ್ರಾಂ ಬಳೆಗಳನ್ನು ಬ್ಯಾಗಿನಿಂದ ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/12/2024 02:33 pm