ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗಬ್ಬೆದ್ದು ನಾರುತ್ತಿದೆ ದೊಡ್ಡ ಚರಂಡಿ: ಹೇಳೋರಿಲ್ಲ.. ಕೇಳೋರಿಲ್ಲ

ಧಾರವಾಡ: ಧಾರವಾಡದ ವಾರ್ಡ್ ನಂಬರ್ 5ರಲ್ಲಿ ಬರುವ ಕೆಎಸ್‌ಆರ್‌ಟಿಸಿ ಡಿಪೊ ಮುಂಭಾಗದ ದೊಡ್ಡ ಚರಂಡಿ ತುಂಬಿ ಇದೀಗ ಗಬ್ಬೆದ್ದು ನಾರುತ್ತಿದೆ. ಈ ಚರಂಡಿ ನೋಡಿದರೆ ಹೇಗಿದೆ ನೋಡಿ ನಮ್ಮ ಸ್ಮಾರ್ಟ್ ಸಿಟಿ ಎನ್ನುವಂತಾಗಿದೆ.

ಕಳೆದ ಏಳೆಂಟು ತಿಂಗಳ ಹಿಂದೆಯೇ ಈ ಚರಂಡಿ ತುಂಬಿದ್ದು, ಅದನ್ನು ಇದುವರೆಗೂ ಸ್ವಚ್ಛಗೊಳಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗದೇ ಇರುವುದು ಅಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದೊಡ್ಡ ಚರಂಡಿ ತುಂಬೆಲ್ಲ ಪ್ಲಾಸ್ಟಿಕ್, ಕಸ ತುಂಬಿ ಬ್ಲಾಕ್ ಆಗಿದ್ದು ನೀರು ಸಮರ್ಪಕವಾಗಿ ಹರಿದು ಹೋಗದೇ ನಿಂತಲ್ಲೇ ನಿಂತು ಗಬ್ಬೆದ್ದು ನಾರುತ್ತಿದೆ. ಇದರಿಂದಾಗಿ ಅದರ ಸುತ್ತಮುತ್ತಲಿನ ಜನ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ.

ಮಳೆಯಾದರೆ ಸಾಕು ಬ್ಲಾಕ್ ಆಗಿರುವ ಈ ಚರಂಡಿಯಿಂದ ನೀರು ಮೇಲೆ ಬಂದು ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತದೆ. ಕಳೆದ ಏಳೆಂಟು ತಿಂಗಳ ಹಿಂದೆಯೇ ಈ ಚರಂಡಿ ತುಂಬಿದ್ದರೂ ಮಹಾನಗರ ಪಾಲಿಕೆಯವರು ಈ ಸಮಸ್ಯೆ ಕಡೆ ಗಮನಹರಿಸಿಲ್ಲ. ಕೂಡಲೇ ಮಹಾನಗರ ಪಾಲಿಕೆ, ಕಸದಿಂದ ತುಂಬಿರುವ ಚರಂಡಿಯನ್ನು ಕ್ಲೀನ್ ಮಾಡಿಸಿ ಅಲ್ಲಿನ ನಿವಾಸಿಗಳಿಗೆ ಗಬ್ಬು ವಾಸನೆಯಿಂದ ಮುಕ್ತಿ ನೀಡಬೇಕಾಗಿದೆ.

Edited By : Manjunath H D
Kshetra Samachara

Kshetra Samachara

29/03/2022 07:06 pm

Cinque Terre

92.24 K

Cinque Terre

7

ಸಂಬಂಧಿತ ಸುದ್ದಿ