ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್
ಹುಬ್ಬಳ್ಳಿ: ಇದು ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್,,,, ಸುದ್ದಿ ಬಿತ್ತರಿಸಿದ ಕೆಲವೇ ದಿನಗಳಲ್ಲಿ ವಾಹನ ಸವಾರರ ಜೀವಕ್ಕೆ ಕಂಟಕವಾಗಿದ್ದ ರೋಡ್ ಬ್ರೇಕರ್‌ಗಳನ್ನು ಅಧಿಕಾರಿಗಳು ಮುಚ್ಚಿಸಿದ್ದಾರೆ. ಇದೀಗ ವಾಹನ ಸವಾರರು ನಿರಾಳವಾಗಿ ಸಂಚಾರ ಮಾಡ್ತಿದ್ದಾರೆ.
ನಿಮ್ಮ ಪಬ್ಲಿಕ್ ನೆಕ್ಸ್ಟ್ ನಲ್ಲಿ "ವಾಹನ ಸವಾರರೇ ಎಚ್ಚರ..! ಎಚ್ಚರ..! ಚನ್ನಮ್ಮ ಸರ್ಕಲ್‌ನಿಂದ ಹೊಸೂರ ವರೆಗೆ ಜೀವಕ್ಕೆ ಕಂಟಕವಾದ ಸ್ಫೀಡ್ ಬ್ರೇಕರಗಳು" ಶೀರ್ಷಿಕೆ ಅಡಿಯಲ್ಲಿ ವಾರದ ಹಿಂದೆ ನಮ್ಮ ಪ್ರತಿನಿಧಿ ಈರಣ್ಣ ವಾಲಿಕಾರ ವರದಿ ಮಾಡಿದ್ದರು. ಸುದ್ದಿಯನ್ನು ನೋಡಿದ ಅಧಿಕಾರಿಗಳು ಎಲ್ಲ ರೋಡ್ ಜಂಪ್‌ಗಳನ್ನು ಸರಿ ಮಾಡಿಸಿದ್ದಾರೆ.
ಒಂದು ಕಡೆ ಹಾಳಾದ ರಸ್ತೆ, ಇನ್ನೊಂದಡೆ ಧೂಳೋ ಧೂಳು. ಹುಬ್ಬಳ್ಳಿಯ ಹೊಸೂರ ಸರ್ಕಲ್‌ನಿಂದ ಚನ್ನಮ್ಮ ಸರ್ಕಲ್ ವರೆಗೆ ವಾಹನ ಸವಾರರು ಬರಬೇಕಾದ್ರೆ ಕೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ರಸ್ತೆಯಲ್ಲಿ ಕೇವಲ ಮೂರು ಕಿ.ಮೀ. ಒಳಗೆ ಸುಮಾರು 15 ಕ್ಕೂ ಹೆಚ್ಚು ರೋಡ್ ಹಂಪ್‌ಗಳಿದ್ದವು. ಪೇವರ್ಸ್‌ಗಳು ಕಿತ್ತು ಬಿದ್ದು ಗುಂಡಿಗಳಾಗಿ ಮಾರ್ಪಟ್ಟಿದ್ದವು. ವಾಹನ ಸವಾರರು ಈ ರಸ್ತೆಯಲ್ಲಿ ಹೋಗಬೇಕಾದ್ರೆ ಹರಸಾಹಸ ಪಡಬೇಕಾಗಿತ್ತು.
ಕೆಲ ವರ್ಷಗಳಿಂದ ವಾಹನ ಸವಾರರು ಇದರಲ್ಲೇ ಓಡಾಡುತ್ತಿದ್ದರು. ಇದನ್ನು ಗಮನಿಸಿ, ಪಬ್ಲಿಕ್ ನೆಕ್ಸ್ಟ್ ಸುದ್ದಿಯನ್ನು ಬಿತ್ತರಿಸಿದ ಒಂದೇ ವಾರದಲ್ಲಿ ಎಲ್ಲ ರೋಡ್ ಬ್ರೇಕರ್‌ಗಳನ್ನು ಡಾಂಬರ್ ಹಾಕಿ ಅಧಿಕಾರಿಗಳು ಸರಿ ಮಾಡಿದ್ದಾರೆ. ಈಗ ವಾಹನ ಸವಾರರು ಆರಾಮವಾಗಿ ಓಡಾಡುತ್ತಿದ್ದಾರೆ. ಈ ಕಾರ್ಯಕ್ಕೆ ಹುಬ್ಬಳ್ಳಿ- ಧಾರವಾಡ ಜನರು ಪಬ್ಲಿಕ್ ನೆಕ್ಸ್ಟ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/12/2024 06:47 pm