ಹುಬ್ಬಳ್ಳಿ: ಕೆಲವು ದಿನಗಳ ಹಿಂದೆ ಬೆಳಗಾವಿ ಅಧಿವೇಶನ ಸಮಯದಲ್ಲಿ 2ಎ ಮೀಸಲಾತಿಗಾಗಿ ಪಂಚಮಸಾಲಿ ಲಿಂಗಾಯತ ಸಮುದಾಯ ಹೋರಾಟ ಮಾಡುತ್ತಿರುವಾಗ, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದನ್ನು ಇಡೀ ರಾಜ್ಯಾದ್ಯಂತ ಲಿಂಗಾಯತ ಸಮುದಾಯ ಖಂಡಿಸಿ ಹೋರಾಟ ಮಾಡಿದ್ದಾರೆ. ಇಲ್ಲಿಯವರೆಗೂ ಸಮುದಾಯದ ಯಾವ ಸ್ವಾಮೀಜಿಯೂ ಧ್ವನಿ ಎತ್ತಿಲ್ಲ ಎಂಬ ಕಾರಣಕ್ಕೆ ಪಂಚಮಸಾಲಿಗಳ ಋಣದಲ್ಲಿರುವ ಮಠಾಧೀಶರೇ ಎಚ್ಚೆತ್ತುಕೊಳ್ಳಿ ಎಂಬ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು,,, ವಿವಿಧ ಮಠಾಧೀಶರ ವಿರುದ್ಧ ಪಂಚಮಸಾಲಿಗಳು ಆಕ್ರೋಶ ಹೊರಹಾಕುತ್ತಿದ್ದು, ಸಾಮಾಜಿಕ ಜಾಲತಾಣಗಳ ಮುಖಾಂತರ ಸ್ವಾಮೀಜಿಗಳ ಜೊತೆ ವಾಗ್ದಾಳಿ ನಡೆಸಿದ್ದಾರೆ. ಪಂಚಮಸಾಲಿಗಳ ಋಣದಲ್ಲಿರುವ ಮಠಾಧೀಶರೇ ಎಚ್ಚೆತ್ತುಕೊಳ್ಳಿ,
ಬೆಳಗಾವಿಯಲ್ಲಿ ನಡೆದ ಘಟನೆ ಅತ್ಯಂತ ಹೇಯಕರ ಕೃತ್ಯವಾಗಿದೆ. ನಾಡಿನ ಈ ಪಂಚಮಸಾಲಿ ಸಮಾಜಕ್ಕೆ ಅತ್ಯಂತ ದುಃಖವಾಗಿದೆ. ಈ ದುಃಖದಲ್ಲಿ ಯಾವುದೇ ಮಠಾಧೀಶರು ಪಾಲ್ಗೊಳ್ಳುತ್ತಿಲ್ಲ ಯಾಕೆ..? ಪಂಚಮಸಾಲಿಗಳು ನಿಮಗೆ ಯಾವುದೇ ಸಹಕಾರ ಮಾಡಿಲ್ಲವೇ, ಪ್ರತಿಯೊಬ್ಬ ಮಠಾಧೀಶರು ಪಂಚಮಸಾಲಿಯ ಸಮುದಾಯದ ಋಣದಲ್ಲಿದ್ದೀರಿ. ಅದಕ್ಕಾಗಿ ನೀವು ಕೂಡಲೇ ಘಟನೆಯನ್ನು ಖಂಡಿಸಿ ಹೇಳಿಕೆಯನ್ನು ಹೊರಡಿಸಬೇಕು.
ಇಲ್ಲವಾದರೆ ಯಾವ ಒಬ್ಬ ಪಂಚಮಸಾಲಿಯೂ ನಿಮಗೆ ನಮಸ್ಕರಿಸುವುದಾಗಲಿ, ನಿಮ್ಮ ಮಠದ ಕಡೆ ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ಸಂದೇಶ ಈಗ ಚರ್ಚೆಗೆ ಗ್ರಾಸವಾಗುತ್ತಿದೆ. ಮಠಾಧೀಶರು ಘಟನೆಯನ್ನು ಖಂಡಿಸಿ 2ಎ ಮೀಸಲಾತಿ ಒತ್ತಾಯಿಸಬೇಕು. ಹಾಗೆಯೇ ಪಂಚಮಿಸಾಲಿಗಳ ಮತ ಪಡೆದ ಎಲ್ಲ ಶಾಸಕರು ಜನಪ್ರತಿನಿಧಿಗಳು ತಕ್ಷಣವೇ ಘಟನೆಯನ್ನು ಖಂಡಿಸಬೇಕೆಂದು ಆಗ್ರಹಿಸಿದ್ದಾರೆ.
Kshetra Samachara
14/12/2024 01:48 pm