ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ-ಧಾರವಾಡ daily roundup 18-03-2022

1. ಪೊಲೀಸ್ ಬೀಟ್ ಹೆಚ್ಚಿಸಿ

ಹುಬ್ಬಳ್ಳಿ- ಧಾರವಾಡ ನಗರಗಳಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕಾರಣದಿಂದ ಕೆಲವು ಏರಿಯಾಗಳಲ್ಲಿ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ಹೀಗಾಗಿ ಮೊದಲಿನಂತೆ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂಬುದು ಜನರ ಒತ್ತಾಯವಾಗಿದೆ.

https://publicnext.com/article/nid/Hubballi-Dharwad/Crime/Law-and-Order/Government/node=620661

2. ನೌಕರಿ‌ ಕೊಡಿಸೋದಾಗಿ ನಂಬಿಸಿ ವಂಚನೆ

ಸರಕಾರಿ ನೌಕರಿ ಕೊಡಸೋದಾಗಿ ವಂಚಿಸಿದ್ದಾರೆಂಬ ಆರೋಪದಲ್ಲಿ ರಾಘವೇಂದ್ರ ಕಟ್ಟಿ ಹಾಗೂ ಶರಣಪ್ಪ ತಿಕೋಟಿಕರ್ ಎಂಬಾತರ ವಿರುದ್ಧ ಕೇಸ್ ದಾಖಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಲ್ಲೂ ವಂಚನೆ ಮಾಡಿದ ಆರೋಪ ಇವರ ಮೇಲಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

https://publicnext.com/article/nid/Hubballi-Dharwad/Crime/node=620429

3. ನಾವು ಒಂದೇ ಪಕ್ಷದವರು ಹಾಗಾಗಿ ಭೇಟಿ ಆಗಿದ್ದೇವೆ

ಬಿ.ವೈ ವಿಜಯೇಂದ್ರ ಹಾಗೂ ನಾನು ಒಂದೇ ಪಕ್ಷದವರು. ನಾವು ಭೇಟಿ ಆಗೋದ್ರಲ್ಲಿ ತಪ್ಪೇನಿಲ್ಲ. ವಿಜಯೇಂದ್ರ ಅವರು ಹುಬ್ಬಳ್ಳಿಗೆ ಬಂದಿದ್ದರು. ಹೀಗಾಗಿ ಕುಶಲೋಪರಿಯ ಭೇಟಿ ಆಗಿದ್ದಾರೆ. ಈ ಭೇಟಿಯಲ್ಲಿ ವಿಶೇಷವೇನಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

https://publicnext.com/article/nid/Hubballi-Dharwad/Politics/node=620474

4.‌ ಹಿಜಾಬ್ ವಿಚಾರದಲ್ಲಿ ಹೋರಾಟ ಸರಿಯಲ್ಲ: ನಡಕಟ್ಟಿನ

ಹಿಜಾಬ್ ವಿಚಾರವಾಗಿ ಹೋರಾಟ ಮಾಡೋದು ಸರಿಯಲ್ಲ. ಹೈಕೋರ್ಟ್ ನೀಡಿರುವ ತೀರ್ಪನ್ನು ಮುಸ್ಲಿಂ ಸಮುದಾಯ ಒಪ್ಪಿಕೊಳ್ಳಬೇಕು. ನಾವು ಯಾವ ದೇಶದಲ್ಲಿರ್ತೀವೋ ಆ ದೇಶದ ಕಾನೂನು ಪಾಲಿಸಬೇಕೆಂದು ಪ್ರವಾದಿ ಮಹಮ್ಮದ್ ಪೈಗಂಬರರು ಹೇಳಿದ್ದಾರೆ ಅಂತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕೃಷಿ ಸಲಕರಣೆ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿನ ಹೇಳಿದ್ದಾರೆ.

https://publicnext.com/article/nid/Hubballi-Dharwad/Politics/Religion/node=620551

5. ಜಿಲ್ಲೆಗೆ ತಂಪೆರೆದ ವರುಣ

ಉರಿಬಿಸಿಲಿನಿಂದ ಬಸವಳಿದಿದ್ದ ಧಾರವಾಡ ಜಿಲ್ಲೆ ಮಂದಿಗೆ ಇಂದು ಸಂಜೆ ವರುಣ ತಂಪೆರೆದಿದ್ದಾನೆ. ಮಧ್ಯಾಹ್ನದಿಂದ ಮೋಡಕವಿದ ವಾತಾವರಣವಿದ್ದಿದ್ದರಿಂದ ಜನತೆ ಮಳೆಯ ನಿರೀಕ್ಷೆಯಲ್ಲಿದ್ದರು. ಅದರಂತೆ ಮಳೆ ಬಂದಿದ್ದರಿಂದ ಜಿಲ್ಲೆಯಲ್ಲಿ ಸದ್ಯ ಕೂಲ್ ಕೂಲ್ ವಾತಾವರಣ ಇದೆ.

https://publicnext.com/article/nid/Hubballi-Dharwad/Nature/node=620615

6. ಮೆದುಳಿನ ಆರೋಗ್ಯ ಕುರಿತು ಜಾಗೃತಿ

ಮೆದುಳಿನ ಆರೋಗ್ಯ ಹಾಗೂ ನರರೋಗ ಕುರಿತು ಜಾಗೃತಿ ಮೂಡಿಸಲು ಮಾ.20 ರಂದು ಹುಬ್ಬಳ್ಳಿ ದೇಶಪಾಂಡೆ ನಗರದ ಸವಾಯಿ ಗಂದರ್ವ ಸಭಾಂಗಣದಲ್ಲಿ ತಿಳಿವಳಿಕೆ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಇದರಲ್ಲಿ ಪಾಲ್ಗೊಂಡು ಮೆದುಳಿನ ಬಗ್ಗೆ ಮಾಹಿತಿ ತಿಳಿಯಬಹುದಾಗಿದೆ ಎಂದು ನರರೋಗ ತಜ್ಞ ಡಾ. ವಿಜಯಮಹಾಂತೇಶ ಪೂಜಾರಿ ಹೇಳಿದ್ದಾರೆ.

https://publicnext.com/article/nid/Hubballi-Dharwad/-and-Fitness/node=620540

7. ನವಲಗುಂದ ಕಾಮಣ್ಣ ದರ್ಶನಕ್ಕೆ ಸಾವಿರಾರು ಭಕ್ತರು

ಹುಣ್ಣಿಮೆ ದಿನದಂದು ನವಲಗುಂದ ಕಾಮಣ್ಣ ದೇವರ ದರ್ಶನಕ್ಕೆ ಸಾವಿರಾರು ಜನ ಆಗಮಿಸಿದ್ದರು. ಇದೇ ವೇಳೆ ದರ್ಶನ ಪಡೆದ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಧಾರವಾಡ ಜಿಲ್ಲೆ ಹಾಗೂ ನೆರೆಹೊರೆ ಜಿಲ್ಲೆಗಳ ಭಕ್ತರು ಕಾಮಣ್ಣ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ.

https://publicnext.com/article/nid/Hubballi-Dharwad/Cultural-Activity/Religion/node=620542

8. ಅಳ್ನಾವರದಲ್ಲಿ ಹೋಳಿ ಸಂಭ್ರಮ

ಧಾರವಾಡ ಅಳ್ನಾವರ ಪಟ್ಟಣದಲ್ಲಿ ಹೋಳಿ ಆಚರಣೆ ಸಂಭ್ರಮ ಜೋರಾಗಿತ್ತು. ಪರಸ್ಪರ ಬಣ್ಣ ಎರಚಿದ ಯುವಕ ಯವತಿಯರು ಸಂಭ್ರಮಿಸಿದರು. ಕೆಲವೆಡೆ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ದೃಶ್ಯಗಳು ಕಂಡು ಬಂದವು.

https://publicnext.com/article/nid/Hubballi-Dharwad/Cultural-Activity/Religion/node=620533

9. ಜಗ್ಗಲಗಿ ಹಬ್ಬದ ಟೀಸರ್ ಬಿಡುಗಡೆ

ಹುಬ್ಬಳ್ಳಿಯ ಪಾರಂಪರಿಕ ಜಗ್ಗಲಗಿ ಹಬ್ಬದ ಟೀಸರ್ ಹಾಗೂ ಲಾಂಛನವನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಿಲೀಸ್ ಮಾಡಿದ್ದಾರೆ. ಹುಬ್ಬಳ್ಳಿಯ ರಂಗಪಂಚಮಿ ಹಾಗೂ ಹೋಳಿ ಪ್ರಯುಕ್ತ ಜಗ್ಗಲಗಿ ಹಬ್ಬವನ್ನು ಸುಮಾರು ವರ್ಷಗಳಿಂದ ಆಚರಿಸಲಾಗುತ್ತಿದೆ.

https://publicnext.com/article/nid/Hubballi-Dharwad/Cultural-Activity/node=620483

10. ಕ್ವಿಂಟಾಲ್ ಕಡಲೆಗೆ ಕನಿಷ್ಟ 8 ಸಾವಿರ ಬೆಲೆ ಕೊಡಿ

ಎಪಿಎಂಸಿಗಳಲ್ಲಿ ತೆರೆಯಲಾಗಿರುವ ಕಡಲೆ ಖರೀದಿ ಕೇಂದ್ರಗಳಲ್ಲಿ ಪ್ರತಿ ಕ್ವಿಂಟಾಲ್‌ಗೆ ಕನಿಷ್ಟ ಎಂಟು ಸಾವಿರ ರೂಪಾಯಿ ಬೆಲೆ ನಿಗದಿಪಡಿಸಬೇಕು ಎಂದು ರೈತ ಹೋರಾಟಗಾರ ಮಲ್ಲಿಕಾರ್ಜುನ ಬಾಳನಗೌಡ್ರ ಒತ್ತಾಯಿಸಿದ್ದಾರೆ.

https://publicnext.com/article/nid/Hubballi-Dharwad/Government/Agriculture/node=620464

Edited By : Nagesh Gaonkar
Kshetra Samachara

Kshetra Samachara

18/03/2022 10:05 pm

Cinque Terre

37.18 K

Cinque Terre

0

ಸಂಬಂಧಿತ ಸುದ್ದಿ