ಹುಬ್ಬಳ್ಳಿ: ಅಬ್ಬಾ ಏನು ಬಿಸಿಲು ಎಂದುಕೊಂಡು ಓಡಾಡುತ್ತಿದ್ದ ಹುಬ್ಬಳ್ಳಿ ಜನರಿಗೆ ಮಧ್ಯಾಹ್ನದ ವೇಳೆ ಮಳೆರಾಯ ತಂಪೆರೆದಿದ್ದಾನೆ. ಬಿಸಿಲಿನ ಬೇಗೆಯಲ್ಲಿ ಓಡಾಡುತ್ತಿದ್ದ ಜನರಿಗೆ ತುಂತುರು ಮಳೆಯಿಂದ ಕೂಲ್ ಕೂಲ್ ಆಗಿದೆ..
ಹೌದು.. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆ ಸೇರಿದಂತೆ ಕೇಶ್ವಾಪೂರದ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣದಿಂದ ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದ ಜನರು ಕೂಲ್ ಆಗಿದ್ದಾರೆ. ಏಕಾಏಕಿ ಮೋಡ ಕವಿದ ವಾತಾವರಣದಿಂದ ಕೊಂಚ ಪ್ರಮಾಣದ ಮಳೆಯಾಗಿದ್ದು, ವಾಣಿಜ್ಯನಗರಿ ಜನರು ಬಿಸಿಲಿನಿಂದ ಸುಧಾರಿಸಿಕೊಳ್ಳುವಂತಾಯಿತು.
Kshetra Samachara
18/03/2022 04:42 pm