ಹುಬ್ಬಳ್ಳಿ: ನಮ್ಮ ಅನ್ನದಾತ ಒಂದಿಲ್ಲೊಂದು ರೀತಿಯಲ್ಲಿ ಸಂಕಟಕ್ಕೆ ಈಡಾಗುತ್ತಿದ್ದಾನೆ. ಮುಂಗಾರಿ ಹಾಗೂ ಹಿಂಗಾರಿ ಬೆಳೆಯ ನಿರೀಕ್ಷೆಯಲ್ಲಿದ್ದ ರೈತನಿಗೆ ಬಹುದೊಡ್ಡ ಎಫೆಕ್ಟ್ ಕೊಟ್ಟಿದ್ದು ಫೆಂಗಲ್ ಚಂಡುಮಾರುತ. ರೈತ ಬೆಳೆದ ಹತ್ತಿ ಈಗ ಸಂಪೂರ್ಣವಾಗಿ ಹಾಳಾಗಿದ್ದು, ಅನ್ನದಾತ ಕಂಗಾಲಾಗಿದ್ದಾನೆ.
ಹೌದು….. ಒಂದೆಡೆ ಅತಿವೃಷ್ಠಿ, ಅನಾವೃಷ್ಠಿಯಿಂದ ಕಂಗೆಟ್ಟಿರುವ ರೈತರಿಗೆ ಮತ್ತಷ್ಟು ಗಾಯದ ಮೇಲೆ ಬರೆ ಎಳೆದಂತಾಗಿದೆ. ಫೆಂಗಲ್ ಎಫೆಕ್ಟ್ ನಿಂದಾಗಿ ರೈತ ಬೆಳೆದ ಹತ್ತಿ ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ. ಈ ಫೆಂಗಲ್ ಎಫೆಕ್ಟ್ ನಿಂದಾಗಿ ಧಾರವಾಡ ಜಿಲ್ಲೆಯಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹತ್ತಿ ಬೆಳೆ ಸಂಪೂರ್ಣ ನಾಶವಾಗಿದೆ. ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಸೇರಿದಂತೆ ಹಲವು ಭಾಗಗಳಲ್ಲಿ ಹತ್ತಿ ಬೆಳೆ ಸಂಪೂರ್ಣ ಕೆಂಪಾಗಿ ಹಾಳಾಗಿರುವ ದೃಶ್ಯಗಳು ಕಂಡುಬರುತ್ತಿವೆ. ಚಂಡಮಾರುತದಿಂದಾಗಿ ಕಳೆದ ನಾಲ್ಕೈದು ದಿನಗಳಿಂದ ಅಕಾಲಿಕ ಮಳೆ ಸುರಿಯುತ್ತಿದೆ. ಇದರಿಂದಾಗಿ ರೈತರಿಗೆ ಮತ್ತಷ್ಟು ಬರಸಿಡಿಲು ಬಡಿದಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಹತ್ತಿ ಬೆಳೆಯಿಂದ ರೈತ ಗೋಳಾಡುತ್ತಿದ್ದಾನೆ.
ಇನ್ನು ರೈತ ಸಾಲ ಶೂಲ ಮಾಡಿ ಬೆಳೆದ ಬೆಳೆ ನಾಶವಾದ ಹಿನ್ನೆಲೆ ಸರ್ಕಾರದ ವಿರುದ್ಧ ರೈತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾನೆ. ರೈತರ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಫೆಂಗಲ್ ಚಡಮಾರುತದ ಎಫೆಕ್ಟ್ ನಿಂದಾಗಿ ಧಾರವಾಡ ಜಿಲ್ಲೆಯ ಅನ್ನದಾತ ಕಂಗಾಲಾಗಿದ್ದಾನೆ. ಫೆಂಗಲ್ ಎಫೆಕ್ಟ್ ನಿಂದಾಗಿ ರೈತರ ಬದುಕು ಬೀದಿಗೆ ಬಿದ್ದಿದೆ. ಸರ್ಕಾರ ಧಾರವಾಡ ಜಿಲ್ಲೆಯ ರೈತರತ್ತ ಗಮನ ಹರಿಸಬೇಕಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
06/12/2024 01:16 pm