ಕುಂದಗೋಳ : ಪ್ರಸ್ತುತ ವರ್ಷ ಅತಿವೃಷ್ಟಿ ಸುಳಿಗೆ ಮಾವು ಬೆಳೆಯನ್ನು ಕಳೆದುಕೊಂಡ ಅರ್ಹ ರೈತರಿಗೆ ಬೆಳೆ ವಿಮೆ ಕೈ ಹಿಡಿದಿದೆ.
ಕುಂದಗೋಳ ತಾಲೂಕಿನ ವಿವಿಧ ಭಾಗಗಳಲ್ಲಿ ಪ್ರಸ್ತುತ ವರ್ಷ 149 ಹೇಕ್ಟರ್ ಕೃಷಿ ಭೂಮಿಯಲ್ಲಿ ಬೆಳೆದ ಮಾವು ಬೆಳೆಗೆ ಬೆಳೆ ಹಾನಿ ವಿಮೆ ಸಂದಾಯವಾಗಿದೆ.
ಒಟ್ಟು 109 ಜನ ರೈತರು ಹವಾಮಾನ ಆಧಾರಿತ ಬೆಳೆ ವಿಮೆಗೆ 3 ಲಕ್ಷ 64 ಸಾವಿರ ರೂಪಾಯಿ ಭರಿಸಿದ್ದರು, ಅವರಲ್ಲಿ ಅರ್ಹ ಬೆಳೆ ಹಾನಿಯಾದ 80 ಜನ ರೈತರಿಗೆ 25 ಲಕ್ಷ 50 ಸಾವಿರ ರೂಪಾಯಿ ಬೆಳೆ ವಿಮೆ ಸಂದಾಯವಾಗಿದೆ.
ಇನ್ನೂ ಸಹಾಯಕ ತೋಟಗಾರಿಕೆ ನಿರ್ದೇಶಕರು ಈ ಮಾಹಿತಿಯನ್ನು ನೀಡಿದ್ದು ಕುಂದಗೋಳ, ಸಂಶಿ ಹೋಬಳಿ ಭಾಗಗಳಲ್ಲಿ ಮಾವು ಬೆಳೆದ ರೈತರು ಸದ್ಯ ವಿಮೆ ಪಡೆದು ತಮ್ಮ ಆರ್ಥಿಕ ಕಷ್ಟದ ಹೊರೆ ಕಡಿಮೆ ಮಾಡಿಕೊಂಡಿದ್ದಾರೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
06/12/2024 06:49 pm