ಹುಬ್ಬಳ್ಳಿ : ಬಿ.ಎಸ್.ವೈ ಪುತ್ರ ವಿಜಯೇಂದ್ರ ಹಾಗೂ ಜಗದೀಶ್ ಶೆಟ್ಟರ್ ಭೇಟಿಯಲ್ಲಿ ಏನು ವಿಶೇಷತೆ ಇಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ಒಂದೇ ಪಾರ್ಟಿಯವರು ಭೇಟಿಯಾಗಿ ಮಾತನಾಡುವುದು ಸಹಜ. ಅವರು ಯಾವುದೋ ಕೆಲಸಕ್ಕೆ ಹುಬ್ಬಳ್ಳಿಗೆ ಬಂದಿದ್ದರು, ಹಾಗೆಯೇ ನಮ್ಮ ಮನೆಗೆ ಬಂದು ಭೇಟಿಯಾಗಿದ್ದಾರೆ. ಬೇರೆ ಪಾರ್ಟಿಯವರು ಭೇಟಿಯಾದರೇ ವಿಶೇಷ ಎನ್ನಬಹುದು. ವಿಶೇಷ ಇದ್ದರೆ ನಾನೇ ನಿಮಗೆ ಹೇಳುತ್ತಿದ್ದೆ ಎಂದರು.
ಗುಜರಾತ್ ನಲ್ಲಿ ಭಗವದ್ಗೀತೆ ಕಲಿಕೆಗೆ ಆದೇಶ ವಿಚಾರವಾಗಿ ಮಾತನಾಡಿದ ಅವರು, ಯಾವ ರೀತಿ ಆದೇಶ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಭಗವದ್ಗೀತೆ ಕಲಿಯೋದು ಒಳ್ಳೆಯದು. ಹಿಜಾಬ್ ಬಗ್ಗೆ ಈಗಾಗಲೇ ನ್ಯಾಯಾಲಯ ಆದೇಶ ನೀಡಿದೆ. ಅದನ್ನು ಪಾಲಿಸೋದು ನಮ್ಮ ಕರ್ತವ್ಯವಾಗಬೇಕು. ಇಲ್ಲ ಅಂದ್ರೆ ಅಜಾಗರೂಕತೆ ಉಂಟಾಗುತ್ತದೆ. ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಬೇಕಾದರೆ ಅವರು ಸುಪ್ರೀಂಗೆ ಹೋಗಲಿ.
ಅಲ್ಲಿ ಅವರಿಗೆ ನ್ಯಾಯ ಸಿಕ್ಕರೆ ಸಿಗಬಹುದು. ಅದು ಬಿಟ್ಟು ನ್ಯಾಯಾಲಯದ ಆದೇಶದ ವಿರುದ್ದ ಪ್ರತಿಭಟನೆ ಮಾಡೋದು ತಪ್ಪು ಎಂದರು.
Kshetra Samachara
18/03/2022 01:49 pm