ಅಳ್ನಾವರ: ಕಣ್ಣಿಗೆ ಕತ್ತಲು ಬರುವಂತ ಬಿಸಿಲು, ಹೊರಗೆ ಕಾಲಿಡಲು ಭಯ ಬೀಳುವ ವಾತಾವರಣದ ನಡುವೆಯೇ ಅಳ್ನಾವರದಲ್ಲಿ ಬಣ್ಣದೋಕುಳಿಗೆ ಎಲ್ಲರೂ ಮುಖ ಒಡ್ಡಿ ಸಂಭ್ರಮಿಸಿದ್ದಾರೆ.
ಮಕ್ಕಳು, ಮಹಿಳೆಯರು, ಹೆಣ್ಣು ಮಕ್ಕಳು ಎಲ್ಲರೂ ಕೂಡಿ ಬಣ್ಣ ಎರಚಿ ಕೃತಕವಾಗಿ ತಾತ್ಕಾಲಿಕ ಕಾರಂಜಿ ಅಳವಡಿಸಿ ನೀರಿನೊಟ್ಟಿಗೆ ಖುಷಿ ಖುಷಿಯಾಗಿ ಬಣ್ಣದ ಹಬ್ಬವನ್ನ ಆಚರಿಸಿದರು. ವಿದ್ಯಾನಗರ ಬಡಾವಣೆಯಲ್ಲಿ ಸೌಂಡ್ ಸಿಸ್ಟಮ್ ಹಚ್ಚಿ ಎಲ್ಲರೂ ಡ್ಯಾನ್ಸ್ ಮಾಡುತ್ತ ಬಣ್ಣದೋಕುಳಿಯನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಷನ್ ಮಾಡಿದ್ದು ಕಂಡು ಬಂದಿತು. ಬೀದಿ ಬದಿ ಬಣ್ಣ, ಮುಖವಾಡಗಳನ್ನು ಮಾರಾಟ ಮಾಡುವಲ್ಲಿ ವ್ಯಾಪಾರಸ್ಥರು ಮಗ್ನರಾಗಿರುವುದರ ಜೊತೆಗೆ ಬಣ್ಣದಾಟದಲಿ ಭಾಗಿಯಾದರು. ಎಲ್ಲೆಡೆ ಸಂತಸದಿಂದ ಬಣ್ಣದ ಹಬ್ಬವನ್ನ ಆಚರಿಸುವ ದೃಶ್ಯಗಳು ಕಂಡು ಬಂದವು.
ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ
Kshetra Samachara
18/03/2022 02:50 pm