ನವಲಗುಂದ : ದುಶ್ಚಟಗಳಿಂದ ದೂರವಾಗಿ ಭಕ್ತಿಯ ಮಾರ್ಗದಲ್ಲಿ ಮುನ್ನಡೆಯಲು ವ್ರತಾಚರಣೆ ಮೂಲಕ ಮಾಲಾಧಾರಿಗಳಾಗಿ ಅಯ್ಯಪ್ಪನ ಸನ್ನಿಧಿಗೆ ತಲುಪುವುದರೊಂದಿಗೆ ಪಟ್ಟಣದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಲು ಮುಂದಾಗಿರುವುದು ಯುವಕರಲ್ಲಿನ ಅಧ್ಯಾತ್ಮ ಸೆಳೆತಕ್ಕೆ ಸಾಕ್ಷಿಯಾಗಿದೆ ಎಂದು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಫಕೀರಸಿದ್ದರಾಮ ಸ್ವಾಮೀಜಿ ಹೇಳಿದರು.
ಸ್ಥಳೀಯ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ಆಯೋಜಿಸಿದ್ದ ಅಯ್ಯಪ್ಪ ಸ್ವಾಮಿ ನೂತನ ದೇವಸ್ಥಾನದ ಭೂಮಿಪೂಜೆ ಶಿಲಾನ್ಯಾಸ ಅನಾವರಣ ಹಾಗೂ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಾಸಕ ಎನ್.ಎಚ್.ಕೋನರಡ್ಡಿ ದೇವಸ್ಥಾನ ನಿರ್ಮಾಣಕ್ಕೆ 15ಗುಂಟೆ ಭೂಮಿಯನ್ನು ದಾನವಾಗಿ ನೀಡುವ ಮೂಲಕ ಮಾಜಿ ಸಚಿವ ಕೆ.ಎನ್.ಗಡ್ಡಿ ಅವರು ಯುವ ಜನತೆಗೆ ಭಕ್ತಿ ಮಾರ್ಗದಲ್ಲಿ ನಡೆಯಲು ಪ್ರೋತ್ಸಾಹಿಸಲು ಉದಾರತೆ ತೋರಿರುವುದು ಅವರ ಅಧ್ಯಾತ್ಮಿಕ ಚಿಂತನೆಗೆ ಸಾಕ್ಷಿಯಾಗಿದೆ ಎಂದರು.
ಈ ವೇಳೆ ಹಿರೇಮಠದ ಸಿದ್ದೇಶ್ವರ ಸ್ವಾಮೀಜಿ, ಗವಿಮಠದ ಬಸವಲಿಂಗ ಸ್ವಾಮೀಜಿ, ನಾಗಲಿಂಗಸ್ವಾಮಿ ಮಠದ ವೀರಯ್ಯ ಸ್ವಾಮೀಜಿ, ಜಮಖಂಡಿಯ ಡಾ.ಮಾಧಲಿಂಗ ಸ್ವಾಮೀಜಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಗುರುಸ್ವಾಮಿಗಳಾದ ನಿಂಗಪ್ಪ ಮುಳ್ಳೂರ, ಕಮಿಟಿ ಅಧ್ಯಕ್ಷ ಮದನಮೋಹನ ಆನೆಗುಂದಿ ಸೇರಿದಂತೆ ಅಯ್ಯಪ್ಪ ಭಕ್ತ ವೃಂದ ಹಾಜರಿದ್ದರು.
Kshetra Samachara
07/12/2024 07:28 pm