ಹುಬ್ಬಳ್ಳಿ: ಮೆದುಳಿನ ಆರೋಗ್ಯ ಹಾಗೂ ನರರೋಗ ವಿಭಾಗದಲ್ಲಿಯೇ ಸಾಕಷ್ಟು ಆಧುನಿಕ ಮತ್ತು ಗುಣಾತ್ಮಕ ಚಿಕಿತ್ಸೆ ಮೂಲಕ ಹೆಸರು ಮಾಡಿರುವ ಹುಬ್ಬಳ್ಳಿಯ ನರವಿಜ್ಞಾನ ಕೇಂದ್ರ ಈಗ ವಿನೂತನ ಹಾಗೂ ಸಾರ್ವಜನಿಕ ಕಾಳಜಿಯ ಅಭಿಯಾನಕ್ಕೆ ಮುಂದಾಗಿದೆ.
ಹೌದು.. ನರ ವಿಜ್ಞಾನ ಕೇಂದ್ರ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹುಬ್ಬಳ್ಳಿ ಬ್ರಾಂಚ್ ಹಾಗೂ ಕರ್ನಾಟಕ ನ್ಯೂರೋಸೈನ್ಸ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಮಾ.20 ರಂದು ಬೆಳಗ್ಗೆ 8:30 ಕ್ಕೆ ವರ್ಲ್ಡ್ ಹೆಡ್ ಇಂಜ್ಯುರಿ ಅವೇರ್ ನೆಸ್ ಡೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಖ್ಯಾತ ನರರೋಗ ತಜ್ಞ ಡಾ.ವಿಜಯಮಹಾಂತೇಶ ಪೂಜಾರಿ ಮಾಹಿತಿ ನೀಡಿದ್ದಾರೆ.
ಹೆಡ್ ಇಂಜುರಿ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿಯ ಕೊರತೆ ಇದ್ದು, ಹೀಗಾಗಿ ಹೆಚ್ಚು ಸಾವು, ನೋವುಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಟ್ರಾಫಿಕ್ ನಿಮಯಗಳು ಸೇರಿದಂತೆ ವಾಹನ ಚಾಲನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಎಸ್.ಎ ಹಾಗೂ ಪೇಂಟಿಂಗ್ ಸ್ಪರ್ಧೆ ಮಾಡಿದ್ದೇವೆ. ಅಂದು ಅತ್ಯುತ್ತಮ ಮೂರು ಬರವಣಿಗೆ ಹಾಗೂ ಚಿತ್ರಕ್ಕೆ ಬಹುಮಾನ ವಿತರಿಸಲಾಗುವುದು. ಅಂದು ಬೆಳಿಗ್ಗೆ 6:30 ಕ್ಕೆ ಸಂಜೀವ ಬಾಟಿಯಾ 99 ಕಾನೋನ್ಸ್ ಮೋಟಾರಸೈಕಲ್ ಕ್ಲಬ್ ಸಹಯೋಗದಲ್ಲಿ ಕಿಮ್ಸ್ ಆಡಳಿತ ಭವನದಿಂದ ಕಿತ್ತೂರ ಚೆನ್ನಮ್ಮ ವೃತ್ತದ ಮಾರ್ಗವಾಗಿ ಸವಾಯಿ ಗಂಧರ್ವ ಹಾಲ್ ವರೆಗೆ ಬೈಕ್ ರ್ಯಾ ಲಿ ನಡೆಸಲಾಗುವುದು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಲಿದ್ದು, ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ್, ಹು-ಧಾ ಪೊಲೀಸ್ ಆಯುಕ್ತ ಲಾಭುರಾಮ್ ಸೇರಿದಂತೆ ಮುಂತಾದ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದ್ರು.
Kshetra Samachara
18/03/2022 02:56 pm