ಹುಬ್ಬಳ್ಳಿ: ವಿಜ್ಞಾನ, ತಂತ್ರಜ್ಞಾನ ಮುಂದುವರೆದ ಇಂತಹ ಕಾಲದಲ್ಲೂ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸುತ್ತಿರುವುದು ನಾಚಿಕೆಗೇಡಿ ಸಂಗತಿ. ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇರೋದು ಅದಕ್ಕಿಂತ ನಾಚಿಕೆಗೇಡು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಾಜ್ಯ ಸರ್ಕಾರ ವಿರುದ್ಧ ಕಿಡಿ ಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿಎಂ ಹೇಳಿದ ಮೂರು ದಿನವಾದರೂ ಯಾವ ಸಚಿವರು ಹೋಗಲ್ಲ. ಅತ್ಯಂತ ಬೇಜವಾಬ್ದಾರಿತನದಿಂದ ವರ್ತಿಸಿದ ಪ್ರವೃತ್ತಿ ಸರ್ಕಾರಕ್ಕೆ ಶೋಭೆ ತರಲ್ಲ. ಸ್ಥಳೀಯವಾಗಿ ಔಷಧಗಳು ಲಭ್ಯ ಇಲ್ಲ, ಯಾವ ಕಂಪನಿ ಕೊಟ್ಟರೂ ತಗೆದುಕೊಳ್ಳತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ದಿವಾಳಿ ಆಗಿದೆ. ದುಡ್ಡಿಲ್ಲದೆ ಬೊಕ್ಕಸ ಖಾಲಿ ಆಗಿದೆ. ಇದನ್ನು ಹೆಚ್ಚು ರಾಜಕೀಯವಾಗಿ ನಾನು ತೆಗೆದುಕೊಳ್ಳಲ್ಲ. ದಿನೇಶ್ ಗುಂಡೂರಾವ್, ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಏನೇನೋ ಉತ್ತರ ಕೊಡ್ತಾರೆ. ಸ್ಥಳಕ್ಕೆ ಅವರು ತಕ್ಷಣ ಹೋಗಬೇಕಿತ್ತು. ಆದ್ರೆ ವಿರೋಧ ಪಕ್ಷದ ನಾಯಕರು ಹೋದ ನಂತರ ಅವರು ಹೋಗುತ್ತಾರೆ. ಇದು ಜನರ ಮೇಲೆ ನೀವು ತೋರಿಸುವ ಜವಾಬ್ದಾರಿ. ಎಲ್ಲವೂ ಎದ್ದು ಕಾಣುತ್ತದೆಂದು ಜೋಶಿ ಕಿಡಿ ಕಾರಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/12/2024 03:20 pm