ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೀದಿ ಬದಿಯಲ್ಲಿ ಗುಟ್ಕಾ, ತಂಬಾಕು ಮಾರಾಟಕ್ಕೂ ಬೇಕು ಲೈಸೆನ್ಸ್ - ಜನವರಿ 1ರಿಂದ ಪಾಲಿಕೆಯ ವಿನೂತನ ಕ್ರಮ

ಹುಬ್ಬಳ್ಳಿ: ಎಚ್ಚರ ಗ್ರಾಹಕರೇ ಎಚ್ಚರ..! ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ತಂಬಾಕು, ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ. ನಿಯಮ ಮೀರಿ ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ಸಿಗರೇಟ್, ಗುಟುಕಾ ಮಾರಾಟ ಮಾಡುವಂತಿಲ್ಲ. ಬೇಕಾಬಿಟ್ಟಿಯಾಗಿ ಪ್ರದರ್ಶನ ಮಾಡಿದರೇ ಹುಷಾರ..! ಪರವಾನಗಿ ಇಲ್ಲದೇ ಮಾರಾಟ ಮಾಡಿದರೇ ಬೀಳುತ್ತೇ ದಂಡ..!

ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಈಗ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಜನವರಿ 1ರಿಂದ ತಂಬಾಕು ಮಾರಾಟಗಾರರು ತಮ್ಮ ವ್ಯವಹಾರಗಳನ್ನು ನಿರ್ವಹಿಸಲು ಕಡ್ಡಾಯ ಪರವಾನಗಿಗಳನ್ನು ಪಡೆಯಬೇಕು.

ಹೌದು. ಜನವರಿ 1 ರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ತಂಬಾಕು ಮಾರಾಟಗಾರರ ಪರವಾನಗಿ ನಿಯಮಾವಳಿಗಳನ್ನು ಜಾರಿಗೊಳಿಸುವ ಪ್ರವರ್ತಕ ನಾಗರಿಕ ಪ್ರಾಧಿಕಾರವಾಗಲಿದೆ. ಈ ಪರವಾನಗಿಯೂ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಹಾಗೂ ತಂಬಾಕು ಮಾರಾಟವನ್ನು ನಿಯಂತ್ರಿಸುವಲ್ಲಿ ಮಹತ್ವದ ಆಡಳಿತಾತ್ಮಕ ಮೈಲಿಗಲ್ಲನ್ನು ಹುಟ್ಟು ಹಾಕಿದೆ. ಕರ್ನಾಟಕ ರಾಜ್ಯ ಸರ್ಕಾರವು ತಂಬಾಕು ಉತ್ಪನ್ನ ಮಾರಾಟ ಸಂಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ಮುನ್ಸಿಪಲ್ ಕಾರ್ಪೊರೇಷನ್ ನಿಯಮಗಳನ್ನು ಜಾರಿಗೊಳಿಸಿತ್ತು. ಅಲ್ಲದೇ ಜನವರಿ 2023ರಲ್ಲಿ ಆದೇಶವನ್ನು ಹೊರಡಿಸಿದ್ದು, ಈ ನಿಯಮಗಳನ್ನು ಜಾರಿಗೆ ತರಲು ರಾಜ್ಯಾದ್ಯಂತ ಎಲ್ಲಾ ಸ್ಥಳೀಯ ಆಡಳಿತ ಮಂಡಳಿಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಲಿಕೆಯು ವಿನೂತನ ರೀತಿಯ ತಂಬಾಕು, ಗುಟ್ಕಾ ಮಾರಾಟಕ್ಕೆ ಪರವಾನಗಿ ಕಡ್ಡಾಯಗೊಳಿಸಿದೆ.

ಇನ್ನೂ ಪಾಲಿಕೆಯು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ (COTPA) ಯ ಅನುಸಾರವಾಗಿ ತಂಬಾಕು ಮಾರಾಟಗಾರರು ತಮ್ಮ ಅಂಗಡಿಗಳಲ್ಲಿ ತಮ್ಮ ಪರವಾನಗಿಯನ್ನು ಗೋಚರವಾಗಿ ಪ್ರದರ್ಶಿಸಬೇಕು ಎಂದು ಆದೇಶಿಸಿದೆ. ತಂಬಾಕು ಮಾರಾಟವನ್ನು ನಿಯಂತ್ರಿಸಲು ಮತ್ತು ನಗರ ಮಿತಿಗಳಲ್ಲಿ ತಂಬಾಕು-ಸಂಬಂಧಿತ ಉತ್ಪನ್ನಗಳ ವಿತರಣೆಯನ್ನು ಕಡಿಮೆ ಮಾಡಲು ಗುರಿಯನ್ನು ಹೊಂದಿದೆ. ಮಾರಾಟಗಾರರು ವಾರ್ಷಿಕ ಪರವಾನಗಿ ನವೀಕರಣಗಳನ್ನು ಪೂರ್ಣಗೊಳಿಸಬೇಕು ಮತ್ತು ಅವರ ಸ್ಟಾಕ್ ಚಲನೆಗಳ ನಿಖರವಾದ ದಾಖಲೆಗಳನ್ನು ನಿರ್ವಹಿಸಬೇಕಿದೆ.

ಒಟ್ಟಿನಲ್ಲಿ ತಂಬಾಕು ಹಾಗೂ ಉತ್ಪನ್ನಗಳ ಮಾರಾಟದ ಮೇಲೆ ನಿಯಂತ್ರಣ ತರುವ ನಿಟ್ಟಿನಲ್ಲಿ ಪಾಲಿಕೆಯು ಮುಂದಾಗಿದ್ದು, ಅವಳಿನಗರದಲ್ಲಿ ಈ ಬಗ್ಗೆ ಪಾಲಿಕೆಯು ತಂಡ ರಚನೆ ಮಾಡಿ ಕಾರ್ಯಾಚರಣೆ ಮಾಡುತ್ತಿದೆ. ಅಲ್ಲದೇ ಹತ್ತು ದಿನಗಳ ಕಾಲಾವಕಾಶದ ಮೂಲಕ ಸೂಕ್ತ ದಾಖಲೆ ಸಿದ್ಧಪಡಿಸಿಕೊಂಡು ಪರವಾನಗಿ ಪಡೆಯಲು ಪಾಲಿಕೆಯು ಸೂಚನೆ ನೀಡಲಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Somashekar
Kshetra Samachara

Kshetra Samachara

11/12/2024 04:52 pm

Cinque Terre

13.42 K

Cinque Terre

18

ಸಂಬಂಧಿತ ಸುದ್ದಿ