ಹುಬ್ಬಳ್ಳಿ : ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ನಿಜ, ಮಿಟಿಂಗ್ ಮಾಡಿ ಕಳಪೆ ಔಷಧಿ ಕೊಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಬ್ಲಾಕ್ ಲಿಸ್ಟ್ ಗೆ ಹಾಕಲು ಹೇಳಿ ಅವರ ವಿಚಾರಣೆ ಮಾಡಲು ಹೇಳಿದ್ದೇನೆ ಡ್ರಗ್ ಕಂಟ್ರೋಲ್ ಮಾಡುವ ಅಧಿಕಾರಿಯನ್ನು ಅಮಾನತು ಮಾಡಲಾಗಿದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇದರ ಜೊತೆಗೆ ಒಂದು ಕಮಿಟಿ ರಚನೆ ಮಾಡಲಾಗಿದೆ. ಆ ಕಮಿಟಿ ವರದಿ ನೀಡಿದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೆವೆ. ಇದು ಮೋಸ್ಟ್ ಅನ್ಫಾರ್ಚುನೆಟ್, ಔಷಧಿ ತಯಾರಿಕೆ ಸಂಸ್ಥೆ ಕಳಪೆ ಔಷಧಿ ಕೊಟ್ಟಿರೋದು ಸಾಬೀತು ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಾವನ್ನಪ್ಪಿರುವ ಬಾಣಂತಿಯರ ಕುಟುಂಬಕ್ಕೆ ಐದು ಲಕ್ಷ ನೀಡುತ್ತೇವೆ. ಕಳಪೆ ಗುಣಮಟ್ಟದ ಔಷಧೀಯ ಖರೀದಿಗೆ ನಾನೇನು ಆದೇಶ ಮಾಡಿದ್ದೆನಾ?ಬಿಜೆಪಿಯವರು ಕೋವಿಡ್ ಹಗರಣದಲ್ಲಿ ಕಳಪೆ ಔಷಧಿ ಖರೀದಿ ಮಾಡಿದ್ದಾರೆ. ಅಲ್ಲದೆ ಒಂದಕ್ಕೆ ಹತ್ತು ಪಟ್ಟು ದುಡ್ಡು ಕೊಟ್ಟು, ಟೆಂಡರ್ ಕರೆಯದೆ ಖರೀದಿ ಮಾಡಿದ್ದಾರೆ ಅಂದಿನ ಸಿಎಂ ಮತ್ತು ಆರೋಗ್ಯ ಸಚಿವರು ಅದಕ್ಕೆ ಹೊಣೆಗಾರರು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/12/2024 07:51 pm