ಧಾರವಾಡ: ಸರ್ಕಾರದಿಂದ ತೆರೆಯಲಾಗಿರುವ ಕಡಲೆ ಖರೀದಿ ಕೇಂದ್ರದ ಮೂಲಕ ರೈತರಿಂದ ಕಡಲೆಯನ್ನೇನೋ ಖರೀದಿ ಮಾಡಲಾಗುತ್ತಿದೆ. ಆದರೆ, ಪ್ರತಿ ರೈತರಿಂದ 25 ಕ್ಷಿಂಟಾಲ್ ಕಡಲೆ ಖರೀದಿ ಮಾಡಿ ಪ್ರತಿ ಕ್ವಿಂಟಾಲ್‌ಗೆ 8 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನಗೌಡ ಬಾಳನಗೌಡರ ಆಗ್ರಹಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ಕಡಲೆ ಖರೀದಿ ಕೇಂದ್ರದಲ್ಲಿ, ಸಾಕಷ್ಟು ಅನ್ಯಾಯ ನಡೆಯುತ್ತಿದೆ. ಕಡಲೆ ತೆಗೆದುಕೊಂಡು ಹೋದ ರೈತರಿಗೆ ಕಡಲೆಯಲ್ಲಿ ಮಣ್ಣು ಇದೆ, ಕಲ್ಲು ಇವೆ ಎಂದು ಮರಳಿ ಕಳಿಸುತ್ತಿದ್ದಾರೆ. ಕೂಡಲೇ ಈ ಅನ್ಯಾಯ ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು ಹಾಗೂ ಬಾಕಿ ಇರುವ ಬೆಳೆವಿಮೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
Kshetra Samachara
18/03/2022 01:34 pm