ಅಳ್ನಾವರ: ಅಳ್ನಾವರ ತಾಲೂಕಿನ ಕೋಗಿಲಗೇರಿ ಗ್ರಾಮವು ಹಾಲಿನ ಉತ್ಪಾದನೆಯಲ್ಲಿ ಮಹತ್ತರ ಸಾಧನೆ ಮಾಡಿ ಇತಿಹಾಸದ ಪುಟಗಳನ್ನ ಸೇರಿದೆ. ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಹಾಲು ಉತ್ಪಾದಕರಿಂದ ಕೇವಲ ಹದಿನೈದು ಲೀಟರ್ ಹಾಲು ಉತ್ಪಾದನೆ ಮಾಡಿ ಕೆ.ಎಂ.ಎಫ್‌ಗೆ ರವಾಣಿಸುತ್ತಿದ್ದ ಗ್ರಾಮ ಇಂದು ದಿನಕ್ಕೆ ಸಾವಿರದ ಐದು ನೂರಾ ಎಪ್ಪತ್ತು ಲೀಟರ್ ಹಾಲನ್ನು ಶೇಖರಣೆ ಮಾಡಿ ಕೆ.ಎಂ.ಎಫ್‌ಗೆ ಕಳಿಸುವ ಮೂಲಕ ಧಾರವಾಡ ಜಿಲ್ಲೆಯಲ್ಲೇ ಮಾದರಿ ಗ್ರಾಮವಾಗಿ ಹೊರಹೊಮ್ಮಿದೆ.
ಕ್ಷೀರದಲ್ಲಿ ಕ್ರಾಂತಿ ಮಾಡುವ ನಿಟ್ಟಿನಲ್ಲಿ ಪಣ ತೊಟ್ಟ ಇಡೀ ಊರಿಗೂರೆ ಸಾಧನೆಯ ಶಿಕರದಲ್ಲಿ ರಾರಾಜಿಸಿದ್ದು ನಿಜಕ್ಕೂ ಸಂತಸದ ಸಂಗತಿ. ಕನಿಷ್ಠ ದರ, ನಿಷ್ಪಕ್ಷಪಾತ ಸೇವೆ, ಹಾಲು ಉತ್ಪಾದಕರ ಜೊತೆ ನಿರಂತರ ಸಂಪರ್ಕದಿಂದಲೇ ಕೇವಲ ಅಳ್ನಾವರ ತಾಲೂಕಿನ ಗ್ರಾಹಕರಲ್ಲದೆ ಪಕ್ಕದ ಬೆಳಗಾವಿ ಜಿಲ್ಲೆಯ ಗಡಿ ಭಾಗದ ಜನರು ಸಹ ಕೋಗಿಲಗೇರಿ ಗ್ರಾಮಕ್ಕೆ ಬಂದು ಹಾಲು ಹಾಕುತ್ತಿದ್ದಾರೆ. 'ಹೈನು ಹೊನ್ನು' ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳು ಲಭಿಸಿದ್ದು, ಅದರಂಗವಾಗಿ ಶನಿವಾರ ರಜತ ಮಹೋತ್ಸವ ಆಚರಣೆ ಬಲು ವಿಜೃಂಭಣೆಯಿಂದ ಜರುಗಿದ್ದು, ಕೋಗಿಲಗೇರಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಜಾನಪದ ಕಲಾ ತಂಡವರಿಂದ ತಮಟೆ, ಜಾನಪದ ಸಾಹಿತ್ಯದ ಘಮಲಿಗೆ ತಾಲೂಕಿನ ಜನತೆ ತಲೆದೂಗಿದರು.
ಯುವ ಸಮೂಹವು ನೌಕರಿಯ ಬೆನ್ನು ಹತ್ತದೆ ಸ್ವಂತ ಉದ್ಯೋಗ ಸೃಷ್ಟಿಸಿ ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಕೋಗಿಲಗೇರಿ ಹಾಲು ಉತ್ಪಾದಕರ ಸಹಕಾರ ಸಂಘವೇ ಜೀವಂತ ನಿದರ್ಶನ ಎಂದು ಪ್ರಗತಿಪರ ರೈತ ಭರತೇಶ ಪಾಟೀಲ್ ಹೇಳಿದರು.
-ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್ ಅಳ್ನಾವರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/12/2024 02:21 pm