ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಎಸಿ ಬಿಟ್ಟು ಬಿಸಿಲಿನತ್ತ ಅಧಿಕಾರಿ ವರ್ಗ ! ಬೆಳೆ ರಕ್ಷಣೆ ಮಾಹಿತಿ ಬಿತ್ತಾರ

ಕುಂದಗೋಳ : ರೈತಾಪಿ ಜನರ ಬೆಳೆಗಳಿಗೆ ಅಂಟಿದ ರೋಗದ ನಿರ್ವಹಣೆ ಮತ್ತು ಪರ್ಯಾಯ ಬೆಳೆ ಬಗೆಗೆ ರೈತರಲ್ಲಿ ಅರಿವು ಮೂಡಿಸಲು ಸ್ವತಃ ಜಂಟಿ ಕೃಷಿ ನಿರ್ದೇಶಕರೇ ಎಸಿ ಕಚೇರಿ ಬಿಟ್ಟು ಬಿಸಿಲಿನ ಜಮೀನಿಗೆ ಎಂಟ್ರಿ ಕೊಟ್ಟಿದ್ದಾರೆ.

ಹೌದು ! ಪ್ರಸ್ತುತ ವರ್ಷ ಹಿಂಗಾರು ಬೆಳೆ ಉತ್ತಮವಾಗಿದ್ದು, ಅಷ್ಟೇ ಪ್ರಮಾಣದಲ್ಲಿ ಕಡಲೆ ಬೆಳೆಗೆ ರೋಗ ಬಾಧೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಇಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮತ್ತು ಉಪ ಕೃಷಿ ನಿರ್ದೇಶಕ ಸಂದೀಪ್.ಆರ್.ಜಿ ಕುಂದಗೋಳ ತಾಲೂಕಿನ ವಿವಿಧ ರೈತರ ಜಮೀನುಗಳಿಗೆ ಭೇಟಿ ನೀಡಿದ್ದಾರೆ.

ಗುಡೇನಕಟ್ಟಿ ಗ್ರಾಮದಲ್ಲಿ ಬೆಳೆ ವೀಕ್ಷಣೆ ಮಾಡಿದ ಅಧಿಕಾರಿಗಳು ರೈತಾಪಿ ಜನರಿಗೆ ಬೆಳೆ ರಕ್ಷಣೆ ನೀಡಿದ ಸಲಹೆ ಹೀಗಿದೆ.

ಪ್ರಮುಖವಾಗಿ ಕೃಷಿ ಇಲಾಖೆಯಿಂದ ರೈತರಿಗೆ ವರವಾಗಿದ್ದ ಕೃಷಿ ಭಾಗ್ಯ ಯೋಜನೆ ಮರಳಿ ಜಾರಿಯಾಗಿದ್ದು, ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಉಪ ಕೃಷಿ ನಿರ್ದೇಶಕ ಸಂದೀಪ್ ಆರ್.ಜಿ ಸಲಹೆ ನೀಡಿದರು.

ಈ ವೇಳೆ ರೈತಾಪಿ ಜನರ ಜಮೀನಿಗೆ ಆಗಮಿಸಿ ಕಡಲೆ, ಗೋಧಿ, ಕುಸುಬೆ, ಜೋಳ ಬೆಳೆ ರಕ್ಷಣೆ ಉಪಯುಕ್ತ ಮಾಹಿತಿ ನೀಡಿದ ರೈತ ಬಾಂಧವರು ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರು ಭಾರತಿ ಮೆಣಸಿನಕಾಯಿ, ತಾಲೂಕು ಆತ್ಮ ಯೋಜನೆ ತಾಂತ್ರಿಕ ವ್ಯವಸ್ಥಾಪಕರಾದ ಶ್ರೀದೇವಿ ಆಲೂರಿ ಸೇರಿ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

13/12/2024 07:02 pm

Cinque Terre

4.37 K

Cinque Terre

0

ಸಂಬಂಧಿತ ಸುದ್ದಿ