ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ

ಧಾರವಾಡ: ಕೇಂದ್ರ ಸರ್ಕಾರದ ಎನ್ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಕಾಯ್ದೆ ಹೆಸರಿನಲ್ಲಿ ವಂಚನೆ ನಡೆಸಲಾಗಿದೆ ಎಂದು ಧಾರವಾಡದ ಎಸ್‌ಜಿಎಸ್ಎಸ್‌ಎಚ್ಆರ್ ಕನ್ಸ್‌ಟೆನ್ಸಿಯ ರಾಘವೇಂದ್ರ ಕಟ್ಟಿ ವಿರುದ್ದ ಹಣ ನೀಡಿದ ವಿದ್ಯಾರ್ಥಿಗಳು ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಹುದ್ದೆಗೆ ಸರಿಸಮಾನದ ಹುದ್ದೆ ನೀಡುವುದಾಗಿ ರಾಘವೇಂದ್ರ ಕಟ್ಟಿ ಹಾಗೂ ಆತನ ಏಜೆಂಟ್ ಶರಣಪ್ಪ ತಿಕೋಟಿಕರ್ ವಿರುದ್ದ 420 ಅಡಿ ಮೋಸ, ವಂಚನೆ ಹಾಗೂ 506 ರ ಅಡಿ ಬೆದರಿಕೆ ಹಾಕಿರುವ ಪ್ರಕರಣ ದಾಖಲಾಗಿದೆ.

ಒಬ್ಬ ವಿದ್ಯಾರ್ಥಿಯಿಂದ 7.10 ಲಕ್ಷ ಹಾಗೂ ಇಬ್ಬರು ವಿದ್ಯಾರ್ಥಿಗಳಿಂದ ತಲಾ 7.55 ಲಕ್ಷ ಒಟ್ಟು 22,25,000 ರೂಪಾಯಿ ಪಡೆದು ನೌಕರಿ ಕೊಡಿಸದೇ ಹಣವೂ ಮರಳಿಸದೇ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ‌. ಸಾಗರ ಶೀಳಿನ ಬ್ಯಾಂಕ್ ಖಾತೆಯಿಂದ 31- 03-2021 ಹಾಗೂ 16-04-2021 ರಂದು ಶರಣಪ್ಪ ತಿಕೋಟಿಕರ ಖಾತೆಗೆ 4,78,000 ರೂಪಾಯಿಗಳನ್ನು ಹಾಕಲಾಗಿದೆ.

ಮಲ್ಲಿಕಾರ್ಜುನ ಕೂಡಗಿ ಬ್ಯಾಂಕ್ ಖಾತೆಯಿಂದ ದಿನಾಂಕ 27-04-2021 ರಂದು ರಾಘವೇಂದ್ರ ಕಟ್ಟಿ ಖಾತೆಗೆ 2,05,000 ರೂಪಾಯಿಗಳನ್ನು ಹಾಕಲಾಗಿದೆ.

ಶಿವರಾಜ ಅವಟಿ ಬ್ಯಾಂಕ್ ಖಾತೆಯಿಂದ ದಿನಾಂಕ 27-04-2021 ರಂದು ರಾಘವೇಂದ್ರ ಕಟ್ಟಿ ಖಾತೆಗೆ 1,95,000 ರೂಪಾಯಿಗಳನ್ನು ಹಾಕಲಾಗಿದೆ. ಇನ್ನುಳಿದ ಹಣವನ್ನು ದಿನಾಂಕ 28-07-2021 ರಂದು 13,87,000 ರೂಪಾಯಿಗಳನ್ನು ರಾಘವೇಂದ್ರ ಕಟ್ಟಿ ಆಪ್ತರಾದ ಶರಣಪ್ಪ ತಿಕೋಟಿಕರ, ಪ್ರೇಮಾ ಪ್ರಭಾಕರ ಪುದುರ, ವೀರೇಶ ಪ್ರಭಾಕರ ಪುದುರ, ಸತೀಶ ಹೊಸಮನಿ, ಉಮೇಶ ಕಳಸದ , ನಾಗರಾಜ ಸಾವನೂರ, ಶಶಿ, ಪ್ರಭಾಕರ ಭಜಂತ್ರಿಯವರ ಸಮಕ್ಷಮದಲ್ಲಿ ಉಮೇಶ ಕಳಸದ ಕಚೇರಿಯಲ್ಲಿ ನೀಡಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ‌.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಧಾರವಾಡದ ಉಪನಗರ ಪೊಲೀಸ್ ಠಾಣೆಯ ಪೊಲೀಸರು ಯಾವ ಕ್ರಮ ಜರುಗಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/03/2022 12:53 pm

Cinque Terre

43.6 K

Cinque Terre

0

ಸಂಬಂಧಿತ ಸುದ್ದಿ