1
ಲವ್ ಜಿಹಾದ್ ಕೇಸ್ ಗೆ ಬಿಗ್ ಟ್ವಿಸ್ಟ್ ಪಾಲಕರಿಗೆ ಶಾಕ್ ಕೊಟ್ಟ ಮಗಳು
ಹುಬ್ಬಳ್ಳಿಯಲ್ಲಿಯ ಲವ್ ಜಿಹಾದ್ ಕೇಸ್ ಗೆ ಬಿಗ್ ಟ್ವಿಸ್ಟ್. ಗೋವಾದಿಂದ ಬಂದ ಮಗಳು ಪಾಲಕರಿಗೆ ಕೊಟ್ಟಳು ಶಾಕ್. ನಿನ್ನೆಯಷ್ಟೇ ಯುವತಿಯ ಪೋಷಕರು ಉಪನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿ ಮುಸ್ಲಿಂ ಯುವಕ ತಮ್ಮ ಮಗಳನ್ನು ಓಡಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ರು.
ಇಂದು ಪ್ರತೇಕ್ಷವಾದ ಮಗಳು ಲವ್ ಜಿಹಾದ್ ಆರೋಪವನ್ನು ತಳ್ಳಿ ಹಾಕಿದ್ದಾಳೆ.
https://publicnext.com/article/nid/Hubballi-Dharwad/Law-and-Order/Religion/node=634458
2.
ಕುಂದಗೋಳದಲ್ಲಿ ಸರ್ಕಾರಿ ಅಧಿಕಾರಿಗೆ ಚಪ್ಪಲಿಯೇಟು
ಕ್ಷುಲ್ಲಕ ಕಾರಣಕ್ಕಾಗಿ ಸಹಾಯಕ ಕೃಷಿ ನಿರ್ದೇಶಕರೊಬ್ಬರಿಗೆ ಸಹೋದರರಿಬ್ಬರಿಂದ ಚಪ್ಪಲಿಯಿಂದ ಹೊಡೆದ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.
ಭೀಮಪ್ಪ ಈಶ್ವರಪ್ಪ ದುಂಡಿಯವರ ಹಾಗೂ ಬಸವರಾಜ ಈಶ್ವರಪ್ಪ ದುಂಡಿಯವರ ಎಂಬ ಸಹೋದರರು ಸಹಾಯಕ ಕೃಷಿ ನಿರ್ದೇಶಕ ಸದಾಶಿವ ಕಾನೂರಿ ಎಂಬ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ.
https://publicnext.com/article/nid/Hubballi-Dharwad/Crime/node=634322
3.
ಪ್ರಸಾದ ಅಬ್ಬಯ್ಯ ವಿರುದ್ಧ ದಲಿತ ಮುಖಂಡರಿಂದ ಆಕ್ರೋಶ
ಡಾ. ಬಾಬು ಜಗಜೀವನರಾಮ್ ಅವರ ಹೆಸರಲ್ಲಿ ಸಮುದಾಯ ಭವನ ಕಟ್ಟಿಲ್ಲವೆಂದು ಹುಬ್ಬಳ್ಳಿಯಲ್ಲಿ ದಲಿತ ಮುಖಂಡರು ಶಾಸಕ ಪ್ರಸಾದ ಅಬ್ಬಯ್ಯ ಅವರ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಒಂದು ಸಭಾ ಭವನ ಕಟ್ಟಲು ಜನಪ್ರತಿನಿಧಿಗಳು ಹರಸಾಹಸ ಪಡುತ್ತಿದ್ದಾರೆ. ಸುಮಾರು 5 ವರ್ಷಗಳಾದರು ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಮಾದಿಗ ಸಮಾಜದವರು ಆಕ್ರೋಶ ಹೊರಹಾಕಿದ್ದಾರೆ.
https://publicnext.com/article/nid/Hubballi-Dharwad/Politics/Infrastructure/node=634228
4
ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ
ಬಿಎಸ್ ಎಫ್ ನಲ್ಲಿ ಸುದೀರ್ಘ 23 ವರ್ಷ ಸೇವೆ ಸಲ್ಲಿಸಿ ಮರಳಿ ಹುಬ್ಬಳ್ಳಿಗೆ ಆಗಮಿಸಿದ ಯೋಧನಿಗೆ ಭರ್ಜರಿ ಸ್ವಾಗತ.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ರೇಲ್ವೆ ನಿಲ್ದಾಣದಲ್ಲಿ ಮಂಜುನಾಥ ಹೆಬಸೂರ ಗೆಳೆಯರ ಬಳಗದಿಂದ ಯೋಧ ಸುರೇಶ ರಾಮು ದೇವೂರಗೆ ಸ್ವಾಗತ. 1999 ರಲ್ಲಿ ಬಿಎಸ್ ಎಫ್ ಗೆ ಸೇರ್ಪಡೆಗೊಂಡಿದ್ದ ಸುರೇಶ ಸೇವಾವಧಿ ಮುಗಿಸಿ ಮರಳಿ ತಮ್ಮೂರಿಗೆ ಬಂದಿದ್ದಾರೆ.
https://publicnext.com/article/nid/Hubballi-Dharwad/News/Public-News/node=634316
5.
ಕರೆಂಟ್ ದರ ಏರಿಕೆ ಖಂಡಿಸಿ ಧಾರವಾಡದಲ್ಲಿ ಪ್ರೊಟೆಸ್ಟ್
ವಿದ್ಯುತ್ ದರ ಏರಿಕೆ ಖಂಡಿಸಿ ಧಾರವಾಡದಲ್ಲಿ ಎಸ್ ಯುಸಿಐ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ಕರೆಂಟ್ ಬಿಲ್ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತ್ತಾಗಿದೆ ಕೂಡಲೇ ಸರ್ಕಾರ ಬಡವರ ಹಿತ ಕಾಯಲು ಮುಂದಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
https://publicnext.com/article/nid/Hubballi-Dharwad/Infrastructure/Government/node=634407
6.
ಗದಗ-ಹುಬ್ಬಳ್ಳಿ ಬಸ್ ಪ್ರಯಾಣ ದುಬಾರಿ
ಹುಬ್ಬಳ್ಳಿ-ಗದಗ ನಡುವೆ ಪ್ರಯಾಣಿಸುವ ಬಸ್ ಗಳ ಬಸ್ ಚಾರ್ಚ್ ತುಟ್ಟಿಯಾಗಿದೆ. ಇದ್ದಕ್ಕಿದ್ದಂತೆ 15 ರೂ. ಹೆಚ್ಚಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರ ಟೋಲ್ ಶುಲ್ಕ ಪಾವತಿಸಲು ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿರುವುದು ಸರಿಯಲ್ಲ.ಕೂಡಲೇ ದರ ಪರಿಷ್ಕರಣೆ ಮಾಡಬೇಕು ಎಂದು ಜನ ಆಗ್ರಹಿಸಿದ್ದಾರೆ.
https://publicnext.com/article/nid/Hubballi-Dharwad/Government/News/Public-News/node=634424
7.
ಸಾಯಿ ಬಾಬಾ ಮಂದಿರದಲ್ಲಿ ರಕ್ತದಾನ ಶಿಬಿರ
ರಾಮನವಮಿ ಅಂಗವಾಗಿ ಹುಬ್ಬಳ್ಳಿಯ ಸಾಯಿಬಾಬಾ ಮಂದಿರದಲ್ಲಿ ಶಾ ದಾಮಜಿ ಜಾದವಜಿ ಛಡ್ಡಾ ಮೆಮೊರಿಯಲ್ ಮತ್ತು ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ.
80ಕ್ಕೂ ಹೆಚ್ಚು ಯುವಕ,ಯುವತಿಯರು ಸೇರಿದಂತೆ ಹಲವಾರರು ರಕ್ತದಾನ ಮಾಡಿದರು.
https://publicnext.com/article/nid/Hubballi-Dharwad/Infrastructure/node=634404
8.
ಜಿಲ್ಲಾಸ್ಪತ್ರೆಗೆ ವಿವಿಧ ವೈದ್ಯಕೀಯ ಉಪಕರಣ ಹಸ್ತಾಂತರ
ಇಂಡಸ್ ಇಂಡ್ ಬ್ಯಾಂಕ್ ನಿಂದ ಧಾರವಾಡ ಜಿಲ್ಲಾಸ್ಪತ್ರೆಗೆ ನಿಯೋನಾಟಲ್ ವೆಂಟಿಲೇಟರ್ ಹಾಗೂ ಸಿಪಿಎಪಿಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮೂಲಕ ಹಸ್ತಾಂತರ.
33 ಲಕ್ಷ ರೂಪಾಯಿ ವೆಚ್ಚದಲ್ಲಿ ಪೂರೈಸಿದ ವೈದ್ಯಕೀಯ ಸಾಧನಗಳನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ಆರ್ ಉಪಳೆ ಹಸ್ತಾಂತರಿಸಿದರು.
https://publicnext.com/article/nid/Hubballi-Dharwad/News/node=634409
9.
ಖಾಸಗೀ ಬಂಕ್ ನಲ್ಲಿ ತೈಲ ತುಂಬಿಸಲ್ಲ ksrtc ನಿರ್ಧಾರ
ಖಾಸಗೀ ಬಂಕ್ ಗಳಿಂದ ಡೀಸೆಲ್ ತುಂಬಿಸಿಕೊಳ್ಳುವ ನಿರ್ಧಾರ ಕೈ ಬಿಟ್ಟ ವಾಯುವ್ಯ ಸಾರಿಗೆ ಸಂಸ್ಥೆ. ಎಂದಿನಂತೆ ತೈಲ ಕಂಪನಿಗಳಿಂದಲೇ ಡೀಸೆಲ್ ಖರೀದಿಸಲು ಮುಂದಾಗಿದೆ. ಖಾಸಗೀ ಬಂಕ್ ಗಳಿಂದ ಖರೀದಿಸಿದ್ರೆ ಲೀಟರ್ ಡಿಸೇಲ್ ಗೆ 16 ರಿಂದ 17 ರೂಪಾಯಿ ಹೆಚ್ಚಾಗುತ್ತಿರುವುದರಿಂದ ಈ ನಿರ್ಧಾರ ಎಂದ ಸಂಸ್ಥೆ.
https://publicnext.com/article/nid/Hubballi-Dharwad/Government/node=634339
10.
ಕುಂದಗೋಳದಲ್ಲಿ ಕಳಪೆ ಕಾಮಗಾರಿ ಬಿರುಕು ಬಿಟ್ಟ ರಸ್ತೆ
ಕುಂದಗೋಳದಲ್ಲಿ 22 ಕೋಟಿ 80 ಲಕ್ಷ ಖರ್ಚು ಮಾಡಿ ನಿರ್ಮಿಸಿದ 19.6 ಕಿಲೋ ಮೀಟರ್ ರಸ್ತೆ ಬಿರುಕು ಬಿಟ್ಟಿದೆ. ಕುಂದಗೋಳ ಪಟ್ಟಣದಿಂದ ದೇವನೂರು ಮಾರ್ಗವಾಗಿ, ಹಂಚಿನಾಳ ತಲುಪಿ ಮುಂದುವರೆಯುವ ರಸ್ತೆಯಲ್ಲಿ ಈ ದುಸ್ತಿತಿ. ಬಿರುಕಿಗೆ ಮಣ್ಣು ಮುಚ್ಚಲು ಮುಂದಾದ ಲೋಕೋಪಯೋಗಿ ಇಲಾಖೆ.
https://publicnext.com/article/nid/Hubballi-Dharwad/Infrastructure/node=634307
Kshetra Samachara
07/04/2022 10:15 pm