ಹುಬ್ಬಳ್ಳಿ: ಖಾಸಗೀ ಬಂಕ್‌ಗಳಿಂದ ಡೀಸೆಲ್ ತುಂಬಿಸಿಕೊಳ್ಳುವ ನಿರ್ಧಾರದಿಂದ ವಾಯುವ್ಯ ಸಾರಿಗೆ ಸಂಸ್ಥೆ ಹಿಂದೆ ಸರಿದಿದೆ. ಹೌದು...ತೈಲ ಮಾರಾಟ ಕಂಪನಿಗಳ ಅಸಹಕಾರದ ಹಿನ್ನೆಲೆಯಲ್ಲಿ ಡೀಸೆಲ್ ಸಗಟು ಖರೀದಿಯಲ್ಲಿ ಲೀಟರ್‌ಗೆ 107 ರೂಪಾಯಿ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ತನ್ನ ಬಸ್ಸುಗಳಿಗೆ ಖಾಸಗಿ ಬಂಕ್‌ಗಳಿಂದ ಡೀಸೆಲ್ ತುಂಬಿಕೊಳ್ಳುವ ನಿರ್ಧಾರಕ್ಕೆ ಮುಂದಾಗಿತ್ತು. ಆದರೆ ಈಗ ಈ ನಿರ್ಧಾರವನ್ನು ಕೈ ಬಿಟ್ಟು ಮೊದಲ ವ್ಯವಸ್ಥೆಯಲ್ಲಿಯೇ ಮುಂದುವರೆದಿದೆ.
ಎಂದಿನಂತೆ ತೈಲ ಕಂಪನಿಗಳಿಂದಲೇ ಡೀಸೆಲ್ ಖರೀದಿಸಲು ಮುಂದಾಗಿದ್ದು, ವಾಕರಸಾ ಸಂಸ್ಥೆಯು ನಿತ್ಯ ಸರಾಸರಿ 2.70 ಲಕ್ಷ ಲೀಟರ್ ಡೀಸೆಲ್ ಬಳಕೆ ಮಾಡುತ್ತದೆ. ಡೀಸೆಲ್ ಸಗಟು ಖರೀದಿಯಲ್ಲಿ ಪ್ರತಿ ಲೀಟರ್‌ಗೆ 107 ಆಗುತ್ತದೆ. ಆದರೆ ಸಾರ್ವಜನಿಕರು ಹಾಕಿಸಿಕೊಳ್ಳುವ ಖಾಸಗಿ ಬಂಕ್‌ಗಳಿಗೆ ಅಂದರೆ ಚಿಲ್ಲರೆ ಮಾರಾಟದಲ್ಲಿ ಗ್ರಾಹಕರಿಗೆ ಡೀಸೆಲ್ ಬೆಲೆ ಕಡಿಮೆಯಾಗುತ್ತದೆ. ಸದ್ಯ ಪ್ರತಿ ಲೀಟರ್‌ಗೆ 89 ರೂಪಾಯಿ ರಿಂದ 90 ರೂಪಾಯಿ ಪ್ರತಿ ಲೀಟರ್ ಖಾಸಗಿ ಬಂಕ್‌ಗಳಲ್ಲಿ ದೊರೆಯುತ್ತದೆ.ಅಂದರೆ 16 ರಿಂದ 17 ರೂಪಾಯಿ ಪ್ರತಿ ಲೀಟರ್‌ಗೆ ಹೆಚ್ಚಾಗುತ್ತದೆ. ಕಳೆದ ವಾರ ಇದಕ್ಕಿಂತ ಹೆಚ್ಚಿತ್ತು. ಈ ಕಾರಣದಿಂದ ಕಳೆದ ಒಂದು ವಾರದಿಂದ ವಾಯವ್ಯ ಸಾರಿಗೆಯೂ ಖಾಸಗಿ ಬಂಕ್‌ಗಳ ಮೊರೆ ಹೋಗಿತ್ತು.
ಒಟ್ಟಿನಲ್ಲಿ ಖಾಸಗಿ ಬಂಕ್ನತ್ತ ಮುಖ ಮಾಡಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಈಗ ಮತ್ತೇ ಸಗಟು ತೈಲ ಕಂಪನಿಯಲ್ಲಿ ಇಂಧನ ಪಡೆಯಲು ಮುಂದಾಗಿವೆ.
Kshetra Samachara
07/04/2022 01:03 pm