ಧಾರವಾಡ: ಇಂಡಸ್ ಇಂಡ್ ಬ್ಯಾಂಕು ತನ್ನ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ ಧಾರವಾಡ ಜಿಲ್ಲಾಸ್ಪತ್ರೆಯ ನವಜಾತ ಶಿಶು ಚಿಕಿತ್ಸಾ ಘಟಕಕ್ಕೆ ನಿಯೋನಾಟಲ್ ವೆಂಟಿಲೇಟರ್ ಹಾಗೂ ಸಿಪಿಎಪಿಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಮೂಲಕ ಹಸ್ತಾಂತರಿಸಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಬೆಳಿಗ್ಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಇಂಡಸ್ ಇಂಡ್ ಬ್ಯಾಂಕು 33 ಲಕ್ಷ ರೂಪಾಯಿ ವೆಚ್ಚದಲ್ಲಿ ಪೂರೈಸಿದ ಎರಡು ನಿಯೋನೆಟಲ್ ವೆಂಟಿಲೇಟರ್‌ಗಳು ಹಾಗೂ ಎರಡು ಸಿಪಿಎಪಿ ಯಂತ್ರೋಪಕರಣ ಸಾಧನಗಳನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ಆರ್ ಉಪಳೆ ಹಸ್ತಾಂತರಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಇವುಗಳ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ್ ಮಾನಕರ್, ಬ್ಯಾಂಕಿನ ಅಧಿಕಾರಿಗಳಾದ ಸಿದ್ದು ಅರಳಿಕಟ್ಟಿ, ಅನಿಲ್ ಬಿ ಮತ್ತಿತರರು ಹಾಜರಿದ್ದರು.
Kshetra Samachara
07/04/2022 03:42 pm