ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸರ್ಕಾರಿ ಅಧಿಕಾರಿಗೆ ಚಪ್ಪಲಿಯೇಟು!; ಸಹೋದರರು ಅಂದರ್

ಕುಂದಗೋಳ: ಕ್ಷುಲ್ಲಕ ಕಾರಣಕ್ಕಾಗಿ ಸಹಾಯಕ ಕೃಷಿ ನಿರ್ದೇಶಕರೊಬ್ಬರಿಗೆ ಇಬ್ಬರು ಸಹೋದರರು ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.

ಕುಂದಗೋಳ ಪಟ್ಟಣದ ಭೀಮಪ್ಪ ಈಶ್ವರಪ್ಪ ದುಂಡಿಯವರ ಹಾಗೂ ಬಸವರಾಜ ಈಶ್ವರಪ್ಪ ದುಂಡಿಯವರ ಎಂಬ ಸಹೋದರರು ಹಳೆ ಚಹಾದ ಬಿಲ್ ಹಾಗೂ ಹಾಗೂ ಹಳೆ ವೇತನ ಬಂದಿಲ್ಲ ಎಂದು ಈ ಹಿಂದೆ ಎರಡು ಬಾರಿ ಸಹಾಯಕ ಕೃಷಿ ನಿರ್ದೇಶಕ ಸದಾಶಿವ ಕಾನೂರಿ ಜೊತೆ ವಾಗ್ವಾದ ನಡೆಸಿದ್ದಲ್ಲದೆ, ಇಂದು ಕರ್ತವ್ಯದ ಮೇಲಿದ್ದ ಅಧಿಕಾರಿಗಳಿಗೆ ಹಲ್ಲೆ ಮಾಡಿದ್ದಾರೆ.

ಹಲ್ಲೆಗೊಳಗಾದ ಸಹಾಯಕ ಕೃಷಿ ನಿರ್ದೇಶಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಇದಲ್ಲದೆ, ಹಲ್ಲೆ ನಡೆಸುವಾಗ ಬಿಡಿಸಲು ಬಂದ ಸಹೋದ್ಯೋಗಿ ಶಂಕರ ಕೊಟ್ಟಣದ ಇವರ ಮೇಲೂ ಕೈ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Edited By : Shivu K
Kshetra Samachara

Kshetra Samachara

07/04/2022 12:19 pm

Cinque Terre

41.05 K

Cinque Terre

9

ಸಂಬಂಧಿತ ಸುದ್ದಿ