ಕುಂದಗೋಳ : ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ನೀವೂ ಸಾರ್ವಜನಿಕರ ಸಂಚಾರಕ್ಕಾಗಿ 22 ಕೋಟಿ 80 ಲಕ್ಷ ಖರ್ಚು ಮಾಡಿ ನಿರ್ಮಿಸಿದಂತಹ 19.6 ಕಿಲೋ ಮೀಟರ್ ರಸ್ತೆ ಬಿರುಕು ಬಿಟ್ಟಿದೆ ನೋಡಿ.
ಕುಂದಗೋಳ ಪಟ್ಟಣದಿಂದ ದೇವನೂರು ಮಾರ್ಗವಾಗಿ, ಹಂಚಿನಾಳ ತಲುಪಿ ಮುಂದುವರೆಯುವ ಎಸ್.ಎಚ್.ಡಿ.ಪಿ ಯೋಜನೆಯಲ್ಲಿ ನಿರ್ಮಿಸಿದ ರಸ್ತೆ ಈ ರೀತಿ ಬಿರುಕು ಬಿಟ್ಟಿದೆ.
ಕೆಲವೆಡೆ ಡಾಂಬರ್ ಸುರಿದು ಈ ಬಿರುಕು ಮುಚ್ಚಲಾಗಿದೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ರಸ್ತೆ ಕಾಮಗಾರಿಯಲ್ಲಿ ದೋಷ ಇದ್ದರೆ ಪರ್ಯಾಯ ಕ್ರಮ ಕೈಗೊಳ್ಳಿ. ಆದರೆ, ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಬೇಡಿ ಎನ್ನುತ್ತಿದ್ದಾರೆ.
ಒಟ್ಟಾರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ, ಬಿರುಕು ಬಿಟ್ಟು ರಸ್ತೆಗೆ ಸರಿಯಾದ ಕ್ರಮ ರೂಪಿಸಿ ರಸ್ತೆ ಅಭಿವೃದ್ಧಿ ಪಡಿಸಿರಿ ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
07/04/2022 11:14 am